HomeHealthಋತುಬಂಧಕ್ಕೊಳಗಾಗುವ ಮಹಿಳೆಯರಲ್ಲಿ ಕಾಡುತ್ತೆ ಈ ಎಲ್ಲಾ ಸಮಸ್ಯೆ...!

ಋತುಬಂಧಕ್ಕೊಳಗಾಗುವ ಮಹಿಳೆಯರಲ್ಲಿ ಕಾಡುತ್ತೆ ಈ ಎಲ್ಲಾ ಸಮಸ್ಯೆ…!

ಮಹಿಳೆಯರು 45 ವರ್ಷದ ಬಳಿಕ ಋತುಬಂಧಕ್ಕೆ ಒಳಗಾಗುತ್ತಾರೆ. ಇದರಿಂದ ಅವರಲ್ಲಿ ಹಾರ್ಮೋನ್ ಬದಲಾವಣೆಗಳಾಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ.

*ತೂಕ ಹೆಚ್ಚಾಗುವುದು : ಋತುಬಂಧದಿಂದ ಹಾರ್ಮೋನ್ ಬದಲಾವಣೆಯಾಗುವುದರಿಂದ ತೂಕ ಹೆಚ್ಚಳವಾಗುತ್ತದೆ. ಇದರಿಂದ ಸ್ತನ ಕ್ಯಾನ್ಸರ್, ಖಿನ್ನತೆ, ಹೃದ್ರೋಗ, ಮಧುಮೇಹ ಸಮಸ್ಯೆ ಕಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಕೂದಲು ತೆಳ್ಳಗಾಗುವುದು : ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದು ಕೂಡ ಹಾರ್ಮೋನ್ ಸಮಸ್ಯೆಯಿಂದ ಕಂಡುಬರುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ. ರಕ್ತ ಸಂಚಾರ ಕೂಡ ಕಡಿಮೆಯಾಗಿ ಕೂದಲಿನ ಬುಡಕ್ಕೆ ರಕ್ತ ಹರಿವು ಕಡಿಮೆಯಾಗಿ ಕೂದಲು ಉದುರಿ ತೆಳ್ಳಗಾಗುತ್ತದೆ.

* ಋತುಬಂಧಕ್ಕೊಳಗಾದ ಮಹಿಳೆಯರ ಚರ್ಮ ಡ್ರೈ ಆಗುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗಿ ಚರ್ಮವು ತೈಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮ ಒಣಗುತ್ತದೆ. ಬೇಗ ಸುಕ್ಕುಗಟ್ಟುತ್ತದೆ. ಹಾಗಾಗಿ ಮಾಯಿಶ್ವರೈಸರ್ ಬಳಸುತ್ತಿರಿ.

For Latest News Updates, Join Our Whatsapp Community🚩
RELATED ARTICLES

Most Popular