ಶ್ವಾಸಕೋಶದ ಸಮಸ್ಯೆ ಹೊರತಾಗಿಯೂ ಏಕಕಾಲದಲ್ಲಿ 14 ವಾದ್ಯ ನುಡಿಸಬಲ್ಲ ಈ ಕಲಾವಿದ…!

ಕೆಲವೊಂದು ವ್ಯಕ್ತಿಗಳಲ್ಲಿ ಅಗಾಧವಾದ ಪ್ರತಿಭೆಗಳು ಇರುತ್ತವೆ. ಇದನ್ನು ನೋಡಿದರೆ ಆಶ್ಚರ್ಯ ಪಡುತ್ತೀರಿ. ಗ್ಲಾಡ್ಸನ್ ಪೀಟರ್ ಅವರು ಅಂಥ ಅಗಾಧ ಪ್ರತಿಭೆ ಇರುವ ವ್ಯಕ್ತಿ.

ಇವರು 49 ಸಂಗೀತ ವಾದ್ಯಗಳನ್ನು ನುಡಿಸಬಲ್ಲರು. ಹೆಚ್ಚು ಆಸಕ್ತಿದಾಯಕ ವಿಷಯವೆಂದರೆ ಅವರು ಒಂದೇ ಸಮಯದಲ್ಲಿ 14 ವಾದ್ಯಗಳನ್ನು ಸಹ ನುಡಿಸಬಲ್ಲರು.

ಸಾಧನೆ ಮಾಡುವ ಮನಸ್ಸು ಇದ್ದರೆ ಯಾವುದೂ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಇವರು ಸಾಕ್ಷಿ. ಏಕೆಂದರೆ ಇವರು ಕೇವಲ 40 ಪ್ರತಿಶತದಷ್ಟು ಶ್ವಾಸಕೋಶದ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಸಮಸ್ಯೆಯ ಹೊರತಾಗಿಯೂ ಇಂಥದ್ದೊಂದು ಸಾಧನೆ ಮಾಡುತ್ತಿದ್ದಾರೆ.

ಗ್ಲಾಡ್ಸನ್ ಪೀಟರ್ ಅವರಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯುವ ಆಸೆಯಿದೆ. ಟ್ರಾವೆಲ್ ಬ್ಲಾಗರ್ ಶೆನಾಜ್ ಟ್ರೆಜರಿ ಅವರು ಇವರ ಸ್ಫೂರ್ತಿದಾಯಕ ಕಥೆಯನ್ನು ಜಗತ್ತಿಗೆ ತಿಳಿಸಲು ವೀಡಿಯೊವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಗ್ಲಾಡ್ಸನ್ ಪೀಟರ್ ವಾದ್ಯಗಳನ್ನು ನುಡಿಸುವಾಗ ಶೆನಾಜ್​ ಅವರ ಬಗ್ಗೆ ಮಾಹಿತಿ ನೀಡುತ್ತಾ, ತಾವೂ ಸ್ಟೆಪ್​ ಹಾಕಿದ್ದಾರೆ. ವಿಡಿಯೋ ಭಾರಿ ವೈರಲ್​ ಆಗಿದ್ದು, ಗ್ಲಾಡ್ಸನ್​ ಅವರ ಆಸೆ ಈಡೇರಲಿ ಎಂದು ಹಾರೈಸಿದ್ದಾರೆ.

https://www.youtube.com/watch?v=f5TkYyR96EM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read