HomeBeautyಚರ್ಮದ ತುರಿಕೆಗೆ ಕಾರಣವಾಗುತ್ತೆ ನೀವು ಮಾಡುವ ಈ ತಪ್ಪು

ಚರ್ಮದ ತುರಿಕೆಗೆ ಕಾರಣವಾಗುತ್ತೆ ನೀವು ಮಾಡುವ ಈ ತಪ್ಪು

ಕೆಲವರ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತವರು ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಚರ್ಮದ ಸಮಸ್ಯೆಗಳು ಕಾಡುತ್ತವೆ. ದದ್ದು, ಅಲರ್ಜಿ, ತುರಿಕೆ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಅಂತವರು ಈ ಟಿಪ್ಸ್… ಫಾಲೋ ಮಾಡಿ.

*ಬೇಸಿಗೆ ಕಾಲದಲ್ಲಿ ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಇದರಿಂದ ಅದರಲ್ಲಿರುವ ರಾಸಾಯನಿಕ ವಸ್ತುಗಳು ಚರ್ಮದ ಮೇಲೆ ಪ್ರತಿಕ್ರಿಯಿಸಿ ಚರ್ಮದಲ್ಲಿ ತುರಿಕೆ, ದದ್ದುಗಳಿಗೆ ಕಾರಣವಾಗುತ್ತದೆ. ಹಾಗಾಗಿ ಸಡಿಲವಾದ ಬಟ್ಟೆಗಳನ್ನು, ಕಾಟನ್ ಬಟ್ಟೆಗಳನ್ನು ಧರಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಅತಿಯಾಗಿ ಔಷಧಗಳನ್ನು ಸೇವಿಸುವುದರಿಂದ ಚರ್ಮದಲ್ಲಿ ಅಲರ್ಜಿ ಉಂಟಾಗುತ್ತದೆ. ರಕ್ತದೊತ್ತಡ, ಈಸ್ಟ್ರೋಜನ್, ನೋವು ನಿವಾರಕ, ಕೊಲೆಸ್ಟ್ರಾಲ್ ಗೆ ಸಂಬಂಧಿಸಿದ ಔಷಧಿಗಳು ತುರಿಕೆಗೆ ಕಾರಣವಾಗಬಹುದು. ಹಾಗಾಗಿ ಮನೆಮದ್ದುಗಳನ್ನು ಸೇವಿಸಿ.

*ಚರ್ಮವನ್ನು ಹೈಡ್ರೇಟ್ ಮಾಡುತ್ತಿರಿ. ಇಲ್ಲವಾದರೆ ಚರ್ಮ ಡ್ರೈ ಆಗಿ ತುರಿಕೆ ಉಂಟಾಗುತ್ತದೆ. ಹಾಗಾಗಿ ಅಲೋವೆರಾ ಜೆಲ್ ಹಚ್ಚುತ್ತಿರಿ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular