HomeHealthಹದಿಹರೆಯದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತವೆ ಆರೋಗ್ಯಕ್ಕೆ ಸಂಬಂಧಿಸಿದ ಈ ಮುಖ್ಯ ಬದಲಾವಣೆ

ಹದಿಹರೆಯದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತವೆ ಆರೋಗ್ಯಕ್ಕೆ ಸಂಬಂಧಿಸಿದ ಈ ಮುಖ್ಯ ಬದಲಾವಣೆ

ಹುಡುಗಿಯರು 20 ನೇ ವರ್ಷಕ್ಕೆ ಕಾಲಿಡ್ತಾ ಇದ್ದಂತೆ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದರಿಂದಾಗಿ ಕೆಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟ ಎದುರಿಸಬೇಕಾಗುತ್ತದೆ.

ಅನಿಯಮಿತ ಮುಟ್ಟು : ಕೆಲ ಹುಡುಗಿಯರು ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸ್ತಾರೆ. 20 ನೇ ವಯಸ್ಸಿನಲ್ಲಿ ಹಾರ್ಮೋನ್ ಏರುಪೇರಿನಿಂದಾಗಿ ಈ ಬದಲಾವಣೆಯಾಗುತ್ತದೆ. ವಿಟಮಿನ್, ಪ್ರೋಟಿನ್ ಹಾಗೂ ಕಬ್ಬಿಣವುಳ್ಳ ಆಹಾರವನ್ನು ಸೇವನೆ ಮಾಡಿ.

ಮೊಡವೆ : 20 ವರ್ಷ ವಯಸ್ಸಿನ ಹುಡುಗಿಯರಲ್ಲಿ ಮೊಡವೆ ಸಾಮಾನ್ಯ. ಇದರಿಂದ ತಪ್ಪಿಸಿಕೊಳ್ಳಲು ಎಣ್ಣೆಯುಕ್ತ ಆಹಾರ ಹಾಗೂ ಉಪ್ಪಿನಕಾಯಿಯಿಂದ ದೂರವಿರಿ. ಮುಖವನ್ನು ದಿನಕ್ಕೆ 5 ಬಾರಿ ತೊಳೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೂಕ ಹೆಚ್ಚಳ ಅಥವಾ ಇಳಿಕೆ : ಈ ಸಮಯದಲ್ಲಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಶುರುವಾಗುತ್ತದೆ. ಹಾಗಾಗಿ 20 ವರ್ಷ ವಯಸ್ಸಿನಲ್ಲಿ ಹುಡುಗಿಯರು ಆಹಾರದ ಜೊತೆಗೆ ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಕೂದಲಿನ ಸಮಸ್ಯೆ : ಹಾರ್ಮೋನ್ ಬದಲಾವಣೆಯಿಂದಾಗಿ ಸೂಕ್ತವಲ್ಲದ ಜಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮನೆ ಮದ್ದನ್ನು ಉಪಯೋಗಿಸಿ.

For Latest News Updates, Join Our Whatsapp Community🚩
RELATED ARTICLES

Most Popular