HomeInternationalಇದು ವಿಶ್ವದ ಭಯಾನಕ ಮನೆ....! ಇಲ್ಲಿ ಒಬ್ಬಂಟಿಯಾಗಿದ್ದರೆ ಸಿಗುತ್ತೆ ಭಾರಿ ʼಬಹುಮಾನʼ

ಇದು ವಿಶ್ವದ ಭಯಾನಕ ಮನೆ….! ಇಲ್ಲಿ ಒಬ್ಬಂಟಿಯಾಗಿದ್ದರೆ ಸಿಗುತ್ತೆ ಭಾರಿ ʼಬಹುಮಾನʼ

ವಿಶ್ವದ ಅತ್ಯಂತ ಭಯಾನಕ ಮನೆ ಎಂದು ಕರೆಯಲ್ಪಡುವ ಕುಖ್ಯಾತ ಮನೆ ಅಮೆರಿಕದ ಟೆನ್ನೆಸ್ಸಿಯಲ್ಲಿದೆ. ಅದರ ಹೆಸರು ಮೆಕೆಮಿ. ಈ ಮನೆ ಎಷ್ಟು ಭಯಾನಕವಾಗಿದೆ ಎಂದರೆ ಇಲ್ಲಿ ಬಂದು ತಂಗುವವರಿಗೆ ಭಾರಿ ಬಹುಮಾನವನ್ನೂ ನೀಡಲಾಗುತ್ತದೆ.

ದೆವ್ವ ಎಂದು ಕೇಳಿದರೆ ಸಾಕು ಹಲವರಿಗೆ ಬೆವರಿಳಿಸುವ ಪದ ಅದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ಅತ್ಯಂತ ಭಯಾನಕವಾದ ಭೂತದ ಮನೆಯಲ್ಲಿ ಬಿಟ್ಟರೆ ಹೇಗಿರುತ್ತದೆ ಅಲ್ವಾ ?

ಹೌದು, ಅಮೆರಿಕದ ಟೆನ್ನೆಸ್ಸಿಯಲ್ಲಿ ಭೂತಗಳ ಆವಾಸ ಸ್ಥಾನ ಎಂದು ಕರೆಯಲಾಗುವ ಈ ಮನೆಯಲ್ಲಿ ಯಾರು ಉಳಿದುಕೊಂಡರೂ ಸಹ ಅವರಿಗೆ ಸಾಕಷ್ಟು ಹಿಂಸೆಯಾಗುತ್ತದೆ ಎಂದು ಈ ಮನೆಗೆ ಭೇಟಿ ನೀಡಿದವರು ಹೇಳುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಷ್ಟೇ ಅಲ್ಲ, ಇಲ್ಲಿಗೆ ಭೇಟಿ ನೀಡಲು ಬರುವವರ ಹಲ್ಲುಗಳನ್ನೂ ಕೀಳಲಾಗಿದೆ ಎಂಬ ಮಾತುಗಳಿವೆ. ದೆವ್ವದ ಮನೆಗೆ ಬರುವವರ ಮೇಲೆ ಅತ್ಯಾಚಾರವೆಸಗಿ ಅವರ ಮೇಲೆ ಕೊಲೆ ಯತ್ನ ಸಹ ನಡೆದಿವೆ ಎಂದು ಕೆಲವರು ಆರೋಪಿಸಿದ್ದಾರೆ.

ಈ ಮನೆಯಲ್ಲಿ ಉಳಿದುಕೊಳ್ಳಲು ಪೈಪೋಟಿ ನಡೆಯುತ್ತಿದ್ದು, 10 ಗಂಟೆ ತಂಗುವ ವ್ಯಕ್ತಿಗೆ ಸುಮಾರು 13 ಲಕ್ಷ ರೂಪಾಯಿ ಮೊತ್ತದ (15 ಸಾವಿರದ 300 ಡಾಲರ್) ಬಹುಮಾನ ನೀಡಲಾಗುತ್ತದೆ.

ಈ ಸ್ಪರ್ಧೆಯಲ್ಲಿ ಗೆಲ್ಲಲು ಅನೇಕರು 10 ಗಂಟೆಗಳ ತೀವ್ರ ಹಿಂಸೆಯನ್ನು ಸಹಿಸಿಕೊಳ್ಳಲು ಮುಂದಾಗಿದ್ದರಾದರೂ ನಂತರ, ಕೆಲವರು ಇದನ್ನು ನಿಲ್ಲಿಸಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಣದ ಆಸೆಗೆ ಏನು ಬೇಕಾದರೂ ಮಾಡಲು ಜನ ಸಿದ್ದವಾಗುವುದರಿಂದ ಪ್ರಾಣಾಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ ಇದನ್ನು ನಿಲ್ಲಿಸಲು ಕೋರಲಾಗುತ್ತಿದೆ.

PC:abp news

For Latest News Updates, Join Our Whatsapp Community🚩
RELATED ARTICLES

Most Popular