HomeAstroಅಂಗೈನಲ್ಲಿ ತುರಿಕೆಯಾದ್ರೆ ಸಿಗುತ್ತೆ ಈ ಸೂಚನೆ

ಅಂಗೈನಲ್ಲಿ ತುರಿಕೆಯಾದ್ರೆ ಸಿಗುತ್ತೆ ಈ ಸೂಚನೆ

ನಮ್ಮಲ್ಲಿ ಸಂಭವಿಸುವ ನೈಸರ್ಗಿಕ ಘಟನೆಗಳು ಭವಿಷ್ಯದಲ್ಲಾಗುವ ಘಟನೆಗಳನ್ನು ಸೂಚಿಸುತ್ತವೆ. ಬೀಳುವ ಕನಸಿನಿಂದ ಹಿಡಿದು ದೇಹದ ಅಂಗದಲ್ಲಾಗುವ ತುರಿಕೆ ಕೂಡ ಮುಂದೆ ಆಗುವುದನ್ನು ಸೂಚಿಸುತ್ತದೆ. ದೇಹದ ವಿವಿಧ ಭಾಗಗಳಲ್ಲಿನ ಬದಲಾವಣೆಗಳ ವಿಶ್ಲೇಷಣೆಯನ್ನು ಸಮುದ್ರಶಾಸ್ತ್ರದಲ್ಲಿ ನೀಡಲಾಗಿದೆ. ದೇಹದ ಯಾವ ಭಾಗದಲ್ಲಿ ತುರಿಕೆಯಾದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂಬುದನ್ನೂ ಹೇಳಲಾಗಿದೆ.

ಬಲಗೈನ ಅಂಗೈನಲ್ಲಿ ತುರಿಕೆಯಾದ್ರೆ ಆತನಿಗೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಎಡಗೈನಲ್ಲಿ ತುರಿಕೆ ಕಾಣಿಸಿಕೊಂಡರೆ ಹಣ ಖರ್ಚಾಗಲಿದೆ ಎಂಬುದರ ಸೂಚನೆ.

ಅಂಗೈ ಬಿಟ್ಟು ಬಲಗೈನಲ್ಲಿ ತುರಿಕೆ ಕಾಣಿಸಿಕೊಂಡರೂ ಹಣ ಪ್ರಾಪ್ತಿಯಾಗಲಿದೆ ಎಂಬ ಸೂಚನೆ ನೀಡುತ್ತದೆ. ಎಡಗೈನಲ್ಲಿ ತುರಿಕೆ ಕಾಣಿಸಿಕೊಂಡರೆ ಹಣ ಕಳೆದುಕೊಳ್ಳುವ ಸೂಚನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಣ್ಣಿನ ಆಸುಪಾಸು ತುರಿಕೆ ಕಾಣಿಸಿಕೊಂಡರೆ ಬೇರೆ ಕಡೆಯಿಂದ ಧನ ಪ್ರಾಪ್ತಿಯಾಗಲಿದೆ ಎಂದರ್ಥ.

ಪುರುಷರ ಎದೆ ಮೇಲೆ ತುರಿಕೆ ಕಾಣಿಸಿಕೊಂಡರೆ ಅವರು ತಂದೆ ಆಸ್ತಿ ಪಡೆಯಲಿದ್ದಾರೆ ಎಂಬ ಸೂಚನೆ. ಮಹಿಳೆ ಎದೆ ಮೇಲೆ ತುರಿಕೆ ಕಾಣಿಸಿಕೊಂಡರೆ ಮಕ್ಕಳಿಗೆ ಕಾಯಿಲೆ ಕಾಡಲಿದೆ ಎಂಬ ಸೂಚನೆ.

For Latest News Updates, Join Our Whatsapp Community🚩
RELATED ARTICLES

Most Popular