ಆತ್ಮವಿಶ್ವಾಸ ದುಪ್ಪಟ್ಟು ಮಾಡುತ್ತೆ ಮನೆಯಲ್ಲಿಡುವ ಈ ಮೂರ್ತಿ

ಮನೆಯ ವಾಸ್ತು ಸರಿಯಿದ್ರೆ ಎಲ್ಲವೂ ಸರಿಯಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿಡುವ ಪ್ರತಿಯೊಂದು ವಸ್ತುವೂ ಮನೆ ವಾಸ್ತು ಮೇಲೆ ಪ್ರಭಾವ ಬೀರುತ್ತದೆ. ಧನಾತ್ಮಕ ಪ್ರಭಾವ ಬೀರುವ ಕೆಲವೊಂದು ವಸ್ತುಗಳನ್ನು ಮನೆಗೆ ತಂದ ಕೆಲವೇ ದಿನಗಳಲ್ಲಿ ಪರಿಣಾಮ ಕಾಣಲು ಶುರುವಾಗುತ್ತದೆ.

ಕೆಲವೊಂದು ವಸ್ತುಗಳನ್ನು ಮನೆಗೆ ತಂದು ನಾವು ಲಾಭ ಕಾಣಬಹುದಾಗಿದೆ. ಮನೆಗೆ ಸುಖ-ಸಮೃದ್ಧಿ ತರುವ ವಸ್ತುಗಳ ಬಗ್ಗೆ ಮಾಹಿತಿ ಪಡೆದು ಅಂತ ವಸ್ತುಗಳನ್ನು ಅವಶ್ಯವಾಗಿ ಮನೆಗೆ ತನ್ನಿ. ಹಿತ್ತಾಳೆಯ ಸಿಂಹದ ಮೂರ್ತಿ ಕಣ್ಣಿಗೆ ಕಂಡ್ರೆ ಅಗತ್ಯವಾಗಿ ಖರೀದಿ ಮಾಡಿ ಮನೆಗೆ ತನ್ನಿ. ಹಿತ್ತಾಳೆ ಸಿಂಹದ ಮೂರ್ತಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆತ್ಮವಿಶ್ವಾಸದ ಕೊರತೆಯಿರುವವರು ಮನೆಗೆ ಹಿತ್ತಾಳೆ ಸಿಂಹವನ್ನು ತಂದಿಡಿ.

ಹಿತ್ತಾಳೆ ಸಿಂಹದ ಮೂರ್ತಿಯನ್ನು ಮನೆಯ ಉತ್ತರ-ಪೂರ್ವ ಭಾಗಕ್ಕೆ ಇಡಿ. ಕೆಲವೇ ದಿನಗಳಲ್ಲಿ ನಿಮ್ಮ ಆತ್ಮವಿಶ್ವಾದಲ್ಲಿ ಆಗ್ತಿರುವ ಬದಲಾವಣೆಯನ್ನು ನೀವು ನೋಡಬಹುದು. ಸಕಾರಾತ್ಮಕ ಬದಲಾವಣೆ ನಿಮ್ಮ ಜೀವನದಲ್ಲಿ ಕೆಲವೊಂದು ಮಹತ್ವದ ನಿರ್ಧಾರಕ್ಕೆ ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read