HomeBeautyಕೂದಲಿನ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಹಣ್ಣಿನ ಪ್ಯಾಕ್

ಕೂದಲಿನ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಹಣ್ಣಿನ ಪ್ಯಾಕ್

ಕೂದಲ ಕಡೆಗೆ ಹೆಚ್ಚು ಗಮನ ಕೊಡದಿದ್ದಾಗ ಕೂದಲಿನ ತುದಿ ಸೀಳಾಗುತ್ತದೆ. ಇದರಿಂದ ಕೂದಲಿಗೆ ಹಾನಿಯಾಗುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯುವುದಿಲ್ಲ. ಈ ಸೀಳು ಕೂದಲಿನ ಸಮಸ್ಯೆ ದೂರವಾಗಲು ಕೂದಲನ್ನು ನಿರಂತರವಾಗಿ ತೇವಗೊಳಿಸುತ್ತಿರಬೇಕು. ಅದಕ್ಕಾಗಿ ಈ ಹೇರ್ ಪ್ಯಾಕ್ ಹಚ್ಚಿ.

1 ಮಾಗಿದ ಬಾಳೆಹಣ್ಣು, 1 ಮೊಟ್ಟೆ, 1 ಚಮಚ ತೆಂಗಿನೆಣ್ಣೆ, 3 ಚಮಚ ಜೇನುತುಪ್ಪ ಇವಿಷ್ಟು ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹೇರ್ ಪ್ಯಾಕ್ ತಯಾರಿಸಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಂಡು ಕೂದಲನ್ನು ಭಾಗ ಮಾಡಿಕೊಂಡು ಈ ಹೇರ್ ಪ್ಯಾಕ್ ನ್ನು ಹಚ್ಚಿ ಕವರ್ ಮಾಡಿ 1 ಗಂಟೆಗಳ ಕಾಲ ಬಿಡಿ. ಬಳಿಕ ಹರ್ಬಲ್ ಶಾಂಪು ಬಳಸಿ ವಾಶ್ ಮಾಡಿ. ಇದನ್ನು ವಾರಕ್ಕೊಮೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular