HomeHealthಬೆನ್ನು ನೋವಿನಿಂದ ಶೀಘ್ರ ಚೇತರಿಕೆ ನೀಡುತ್ತೆ ಈ ಸುಲಭದ ಪರಿಹಾರ.…!

ಬೆನ್ನು ನೋವಿನಿಂದ ಶೀಘ್ರ ಚೇತರಿಕೆ ನೀಡುತ್ತೆ ಈ ಸುಲಭದ ಪರಿಹಾರ.…!

ಬೆನ್ನು ನೋವಿನ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಗಂಟೆಗಟ್ಟಲೆ ಕುರ್ಚಿ ಮೇಲೆ ಕುಳಿತೇ ಕೆಲಸ ಮಾಡುವುದು, ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಲೂ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಂದು ಸರಳ ಪರಿಹಾರಗಳ ಮೂಲಕ ಬೆನ್ನುನೋವನ್ನು ನಿವಾರಿಸಬಹುದು.

ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನು ನೋವು ಬರುತ್ತದೆ. ಈ ರೀತಿ ಕುಳಿತುಕೊಳ್ಳುವ ವೇಳೆ ನಮ್ಮ ಭಂಗಿ ಸರಿಯಾಗಿರಬೇಕು. ಆಗ ಬೆನ್ನು ನೋವು ಕಾಡುವುದಿಲ್ಲ. ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು. ಆಗೊಮ್ಮೆ ಈಗೊಮ್ಮೆ ಏಳುತ್ತಲೇ ಇರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವೊಮ್ಮೆ ಬೆನ್ನಿನ ಕೆಳಭಾಗ ಅಥವಾ ಸೊಂಟದಲ್ಲಿ ಕೂಡ ನೋವು ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಸಾಸಿವೆ ಎಣ್ಣೆಯಲ್ಲಿ ಬೆಳ್ಳುಳ್ಳಿ ಎಸಳನ್ನು ಹಾಕಿ ಕುದಿಸಿ, ಆ ಎಣ್ಣೆಯಿಂದ  ಸೊಂಟಕ್ಕೆ ಮಸಾಜ್ ಮಾಡಿಕೊಳ್ಳಬೇಕು.

ಬೆನ್ನು ನೋವು ತೀವ್ರವಾಗಿದ್ದಾಗ ಎದ್ದು ಕುಳಿತುಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ಬಿಸಿನೀರನ್ನು ಬೆನ್ನಿಗೆ ಹಾಕಿಕೊಳ್ಳಿ. ಇದರಿಂದ ನೋವಿಗೆ ಪರಿಹಾರ ಸಿಗುತ್ತದೆ.

ದೀರ್ಘಕಾಲದವರೆಗೆ ಬೆನ್ನುನೋವಿನಿಂದ ಬಳಲುತ್ತಿದ್ದರೆ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಸೂಚಿಸಿದ ಯೋಗಾಸನಗಳನ್ನು ತಪ್ಪದೇ ಮಾಡಬೇಕು.

ಬೆನ್ನು ನೋವಿನ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಸೇವಿಸಬೇಕು. ಇದನ್ನು ಕುಡಿಯುವುದರಿಂದ ದೇಹದ ಆಯಾಸ, ನೋವು ಎಲ್ಲವೂ ದೂರವಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular