HomeHealthಮೂಳೆ ದುರ್ಬಲಗೊಳ್ಳಲು ಕಾರಣವಾಗ್ಬಹುದು ನಿಮ್ಮ ಈ 'ಆಹಾರ'

ಮೂಳೆ ದುರ್ಬಲಗೊಳ್ಳಲು ಕಾರಣವಾಗ್ಬಹುದು ನಿಮ್ಮ ಈ ‘ಆಹಾರ’

ಪ್ರತಿ ದಿನ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವನೆ ಮಾಡುವವರಿದ್ದಾರೆ. ಈ ಕೆಫೀನ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅನೇಕ ಸಮಸ್ಯೆಗಳಿಗೆ ಕೆಫೀನ್ ಕಾರಣವಾಗುತ್ತದೆ. ಹೆಚ್ಚು ಕೆಫೀನ್ ಸೇವನೆಯು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

30 ವರ್ಷ ವಯಸ್ಸಿನ ನಂತ್ರ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಹಾಗಾಗಿ ಎಲುಬುಗಳ ಬಗ್ಗೆ ವಿಶೇಷ ಕಾಳಜಿ ಅಗತ್ಯವಿರುತ್ತದೆ. ವಯಸ್ಸಾದಂತೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗುತ್ತದೆ. ಮೂಳೆಗಳು ಶಬ್ಧ ಮಾಡಲು ಶುರು ಮಾಡುತ್ತವೆ. ಕ್ಯಾಲ್ಸಿಯಂ ಕಡಿಮೆಯಾದ್ರೆ ಮೂಳೆ ಜೊತೆ ಹಲ್ಲಿನ ಸಮಸ್ಯೆಯೂ ಕಾಡುತ್ತದೆ.

ಕೆಫೀನ್ ದೇಹದಲ್ಲಿ ಹೆಚ್ಚಾದ್ರೆ ಮೂಳೆಗಳು ದುರ್ಬಲವಾಗುತ್ತವೆ. ಹಾಗಾಗಿ ವಯಸ್ಸಾಗ್ತಿದ್ದಂತೆ ಕೆಫೀನ್ ಸೇವನೆಯನ್ನು ಸಂಪೂರ್ಣ ನಿಲ್ಲಿಸುವುದು ಒಳ್ಳೆಯದು. ಸಣ್ಣ ವಯಸ್ಸಿನಲ್ಲಿಯೇ ಕೆಫೀನ್ ಅತಿಯಾಗಿ ಸೇವನೆ ಮಾಡುವವರಿಗೆ ವಯಸ್ಸಿಗಿಂತ ಮೊದಲೇ ಮೂಳೆ ಸಮಸ್ಯೆ ಶುರುವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ ಕೇಫಿನ್ ಮಾತ್ರವಲ್ಲ ಮೂಳೆ ನೋವಿಗೆ ಪ್ರೋಟೀನ್ ಕೊರತೆಯೂ ಕಾರಣ. ಪ್ರೋಟೀನ್ ದೇಹಕ್ಕೆ ಸಿಗದೆ ಹೋದ್ರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಹಾಗಾಗಿ ಆಹಾರದಲ್ಲಿ ಸಾಕಷ್ಟು ಬೇಳೆಕಾಳುಗಳು ಮತ್ತು ಪ್ರೋಟೀನ್-ಭರಿತ ವಸ್ತುಗಳನ್ನು ಸೇರಿಸಬೇಕು.

ತಂಪು ಪಾನೀಯಗಳು, ಶಾಂಪೇನ್ ಮುಂತಾದ ಕಾರ್ಬೊನೇಟೆಡ್ ಪಾನೀಯ ಕೂಡ  ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಕಾರ್ಬೊನೇಟೆಡ್ ಪಾನೀಯಗಳು ಕ್ಯಾಲ್ಸಿಯಂ ಕಡಿಮೆ ಮಾಡುತ್ತವೆ. ಇದು ಮೂಳೆಗಳ ದುರ್ಬಲತೆಗೆ ಕಾರಣವಾಗುತ್ತದೆ. ಇವೆಲ್ಲವುಗಳ ಮಧ್ಯೆ ಮೂಳೆ ದುರ್ಬಲಗೊಳ್ಳಲು ಒತ್ತಡ ಕೂಡ ಕಾರಣ. ಮೂಳೆಗಳನ್ನು ದುರ್ಬಲವಾಗಬಾರದು ಎನ್ನುವವರು ಒತ್ತಡದಿಂದ ದೂರವಿರಿ.

For Latest News Updates, Join Our Whatsapp Community🚩
RELATED ARTICLES

Most Popular