HomeEntertainmentʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ

ʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ

ನೀವು ಸಂಗೀತ ಪ್ರೇಮಿಯಾಗಿದ್ದರೆ, ಜಾಲತಾಣಗಳಲ್ಲಿ ವೈರಲ್​ ಆಗುವ ಮೆಚ್ಚಿನ ಹಾಡುಗಳನ್ನು ಪದೇ ಪದೇ ಕೇಳುತ್ತಿರುತ್ತೀರಿ. ಅವುಗಳಲ್ಲಿ ಒಂದು ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಐಕಾನಿಕ್ ಸಾಂಗ್ ‌ʼದೀವಾನಾ ಹುವಾ ಬಾದಲ್ʼ ಕೂಡ ಇದ್ದರಲಿಕ್ಕೆ ಸಾಕು.

ಈ ಹಾಡು ಇದೀಗ ಮತ್ತೆ ವೈರಲ್​ ಆಗಿದೆ. ಇದಕ್ಕೆ ಕಾರಣ ಬಾಲಕನೊಬ್ಬ ಈ ಹಾಡನ್ನು ಸುಮಧುರವಾಗಿ ಹಾಡಿದ್ದಾನೆ. ಈತನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಈತನ ಧ್ವನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇವನ ಹಾಡು ಕೇಳುತ್ತಿದ್ದರೆ ಮುಖದಲ್ಲಿ ದೊಡ್ಡ ನಗು ಮೂಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸಾನಿಗ್ಧ್ ಜೇತ್ವಾ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಕಿರು ವಿಡಿಯೋದಲ್ಲಿ, ಸಾನಿಘ್ ಎಂಬ ಬಾಲಕ 1964 ರ ಕಾಶ್ಮೀರ ಕಿ ಕಲಿ ಚಿತ್ರದ ಹಾಡನ್ನು ಹಾಡಿದ್ದಾನೆ. ಇದಕ್ಕೆ ಸಹಸ್ರಾರು ಮಂದಿ ಕಮೆಂಟ್​ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular