ಒಂಟಿತನದಿಂದ ಬಳಲುವವರಿಗೆ ಮಾಸಿಕ ಭತ್ಯೆ: ದಕ್ಷಿಣ ಕೊರಿಯಾ ಯುವಕರಿಗಾಗಿ ಹೊಸ ಯೋಜನೆ

ಒಂಟಿತನ ಅಂದರೆ ಯಾರೂ ಇಲ್ಲದಿದ್ದಾಗ ಒಂಟಿಯಾಗಿರುವುದು ಅನ್ನೊ ಅರ್ಥ ಅಲ್ಲ. ಮಾನಸಿಕವಾಗಿ ತುಂಬಾ ನೊಂದಿದ್ದಾಗ ಒಂಟಿಯಾಗಿರಬೇಕು. ಯಾರ ಅವಶ್ಯಕತೆ ಇಲ್ಲ ತನಗೆ ಅನಿಸೋ ಭಾವ ಹುಟ್ಟುತ್ತಲ್ವಾ ಅದೇ ಒಂಟಿತನ. ಹೀಗೆ ಒಂಟಿತನಕ್ಕೆ ಭಾವಕ್ಕೆ ಒಳಗಾದವರು ಸಮಾಜದಿಂದ ವಿಮುಖರಾಗಿ ಬಿಟ್ಟಿರುತ್ತಾರೆ. ಅವರು ಜನರ ಜೊತೆ ಸಹಜವಾಗಿ ಬೆರೆಯಲು ಕಷ್ಟಪಡುತ್ತಿರುತ್ತಾರೆ.

ದಕ್ಷಿಣ ಕೊರಿಯಾ ಯುವಜನತೆ ಒಂಟಿತನಕ್ಕೆ ಒಳಗಾಗುತ್ತಿರುವುದನ್ನ ಗುರುತಿಸಿರುವ ಅಲ್ಲಿನ ಸರ್ಕಾರ, ಇದರ ಕುರಿತಾಗಿ ಚಿಂತೆ ವ್ಯಕ್ತಪಡಿಸಿದೆ. ಅವರಲ್ಲಿರುವ ಒಂಟಿತನದ ಭಾವವನ್ನ ತೆಗೆದು ಹಾಕಿ ಮತ್ತೆ ಸಹಜ ಮನೋಭಾವ ಬೆಳೆಸುವುದಕ್ಕೆ ಹೊಸ ಕ್ರಮವೊಂದನ್ನ ಜಾರಿತರುವ ಪ್ರಯತ್ನ ಮಾಡುತ್ತಿದೆ.

ಮಾನಸಿಕ ಮತ್ತು ಭಾವನಾತ್ಮಕ ಸ್ಥಿರತೆ ಮತ್ತು ಆರೋಗ್ಯಕರ ಬೆಳವಣಿಗೆಯನ್ನ ಗಮನದಲ್ಲಿ ಇಟ್ಟುಕೊಂಡು, ಇಲ್ಲಿನ ಲಿಂಗ ಸಮಾನತೆ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೀಗೆ ಒಂಟಿತನ ಹಾಗೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದವರಿಗೆ ತಿಂಗಳಿಗೆ 650,000 ಕೊರಿಯನ್ ವನ್ ಅಂದರೆ ತಿಂಗಳಿಗೆ 500 ಡಾಲರ್ ನೀಡಲು ನಿರ್ಧರಿಸಿದೆ.

ಕೊರಿಯಾ ಇನ್ಸಿಟ್ಯೂಟ್ ಫಾರ್ ಹೆಲ್ತ್ ಎಂಡ್ ಸೋಶಿಯಲ್ ಅಫೇರ್ಸ್ನ್ನು ಉಲ್ಲೇಖಿಸಿ ಸಚಿವಾಲಯ ಸಿದ್ಧಪಡಿಸಿರುವ ವರದಿಯಲ್ಲಿ 19 ರಿಂದ 39 ವರ್ಷ ವಯಸ್ಸಿನ ಕೊರಿಯನ್ನರಲ್ಲಿ ಮಾನಸಿಕ ಸಮಸ್ಯೆಗಳು ಕಂಡು ಬಂದಿವೆ. ಅದರಲ್ಲಿ 3.1 ಪ್ರತಿಶತದಷ್ಟು ಜನರು ಈ ಒಂಟಿತನಕ್ಕೆ ಒಳಗಾಗಿದ್ದವರಿದ್ದಾರೆ.

ಅಂದರೆ ರಾಷ್ಟ್ರದಲ್ಲಿ ಏನಿಲ್ಲ ಅಂದರೂ ಸುಮಾರು 338,000 ಜನರು ಒಂಟಿತನದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಮಾನಸಿಕ ಅಸ್ವಸ್ಥತೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ದಕ್ಷಿಣ ಕೊರಿಯಾ ಸರ್ಕಾರ ಈಗ 9 ರಿಂದ 24 ವರ್ಷ ವಯಸ್ಸಿನ ಯುವಕರಿಗೆ ಚಿಕಿತ್ಸೆಯ ಜೊತೆ ಜೊತೆಗೆ ಮಾಸಿಕ ಭತ್ಯೆಯನ್ನು ಕೊಡುವುದಾಗಿ ಹೇಳಿದೆ. ಜೊತೆಗೆ ನಾಲ್ಕು ಜನರ ಕುಟುಂಬಕ್ಕೆ ಮಾಸಿಕ ಆದಾಯ ಪರಿಗಣಿಸಿ ಆ ಕುಟುಂಬಕ್ಕೂ ಸಹಾಯ ಮಾಡುವುದಾಗಿ ಹೇಳಿದೆ. ಸದ್ಯಕ್ಕೆ ಇದಕ್ಕಾಗಿಯೇ ಹಣ ಮೀಸಲಾಗಿಡಲಾಗಿದೆ. ಈಗಾಗಲೇ ಅನೇಕ ಪೋಷಕರು, ತಮ್ಮ ಕುಟುಂಬದ ಸದಸ್ಯರ ಪರವಾಗಿ ಅರ್ಜಿಯನ್ನ ಸಲ್ಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read