HomeEntertainmentಕಳ್ಳತನಕ್ಕೆಂದು ಬಂದ ಕಳ್ಳನ ಅವಾಂತರ: ಅಡುಗೆ ಮನೆ ಫ್ಯಾನ್ ರಂಧ್ರದಲ್ಲಿ ಸಿಲುಕಿ ನರಳಾಟ; ವಿಡಿಯೊ

ಕಳ್ಳತನಕ್ಕೆಂದು ಬಂದ ಕಳ್ಳನ ಅವಾಂತರ: ಅಡುಗೆ ಮನೆ ಫ್ಯಾನ್ ರಂಧ್ರದಲ್ಲಿ ಸಿಲುಕಿ ನರಳಾಟ; ವಿಡಿಯೊ

ಕೋಟಾ (ರಾಜಸ್ಥಾನ): ಕಳ್ಳತನಕ್ಕೆ ಹೋದವನಿಗೆ ತಾನೇ ಸಿಕ್ಕಿಬಿದ್ದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಸುಭಾಷ್ ಕುಮಾರ್ ರಾವತ್ ಅವರ ಮನೆಯ ಕಿಚನ್ ಎಕ್ಸಾಸ್ಟ್ ಫ್ಯಾನ್ ಶಾಫ್ಟ್ ಮೂಲಕ ನುಗ್ಗಿ ಕಳವು ಮಾಡಲು ಪ್ರಯತ್ನಿಸಿದ ಕಳ್ಳ ಸಣ್ಣ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಜನವರಿ 3ರಂದು ಸುಭಾಷ್ ಕುಮಾರ್ ರಾವತ್ ಖಾತುಶ್ಯಾಮ್‌ಜಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಆಗಮಿಸಿದ್ದರು. ಪೊಲೀಸ್ ಸ್ಟಿಕ್ಕರ್ ಹೊಂದಿದ ಕಾರಿನಲ್ಲಿ ಬಂದಿದ್ದ ಆರೋಪಿಗಳು ಅನುಮಾನ ಬರದಂತೆ ಯೋಜನೆ ರೂಪಿಸಿದ್ದರು. ಆದರೆ ಎಕ್ಸಾಸ್ಟ್ ಫ್ಯಾನ್ ಶಾಫ್ಟ್ ಮೂಲಕ ಮನೆಗೆ ನುಸುಳಲು ಪ್ರಯತ್ನಿಸಿದಾಗ ಕಳ್ಳನೊಬ್ಬ ಸಿಕ್ಕಿಹಾಕಿಕೊಂಡ. ಅವನ ದೇಹದ ಒಂದು ಭಾಗ ಮನೆಯೊಳಗೆ, ಉಳಿದಭಾಗ ಹೊರಗೆ ತೂಗುತ್ತಿತ್ತು.

ಮರುದಿನ ಮಧ್ಯರಾತ್ರಿ ಸುಮಾರು 1 ಗಂಟೆಗೆ ಮನೆಗೆ ಮರಳಿದ ರಾವತ್ ಅವರ ಪತ್ನಿ ಸ್ಕೂಟರ್ ಲೈಟ್ ಹಾಕಿ ಬೀಗ ತೆಗೆಯುತ್ತಿದ್ದಾಗ ಶಬ್ದ ಕೇಳಿ ಆತಂಕಗೊಂಡರು. ಆಗ ಕಳ್ಳನ ಸಹಚರ ಓಡಿಹೋದ. ಸ್ಥಳೀಯರು ಸುಮಾರು ಒಂದು ಗಂಟೆ ಸ್ಥಿತಿ ನೋಡಿ ನಿಂತರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರು ಆಗಮಿಸಿ ಸಿಕ್ಕಿಹಾಕಿಕೊಂಡಿದ್ದ ಕಳ್ಳನನ್ನು ರಕ್ಷಿಸಿ ಬಂಧಿಸಿದರು.ಪರಾರಿಯಾದ ಸಹಚರನನ್ನು ಹುಡುಕುತ್ತಿರುವ ಪೊಲೀಸರು, ಆರೋಪಿ ಇತರ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೇ ಎಂದು ತನಿಖೆ ನಡೆಸುತ್ತಿದ್ದಾರೆ.ಈ ಅಪರೂಪದ ಘಟನೆಯ ವೀಡಿಯೋ ಇಂಟರ್ನೆಟ್‌ನಲ್ಲಿ ತೀವ್ರ ವೈರಲ್ ಆಗಿದ್ದು, ನೆಟ್ಟಿಗರನ್ನು ನಗಿಸುತ್ತಿದೆ.

https://twitter.com/i/status/2008556516044140777

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular