HomeLatest NewsBREAKING: ಕೈದಿಗೆ ಕೊಡಲು ತಂದಿದ್ದ ಹಣ್ಣು, ಬಟ್ಟೆ ಪರಿಶೀಲಿಸಿದ ಕಾರಾಗೃಹ ಸಿಬ್ಬಂದಿಗೇ ಶಾಕ್: ಗಾಂಜಾ ಪತ್ತೆ

BREAKING: ಕೈದಿಗೆ ಕೊಡಲು ತಂದಿದ್ದ ಹಣ್ಣು, ಬಟ್ಟೆ ಪರಿಶೀಲಿಸಿದ ಕಾರಾಗೃಹ ಸಿಬ್ಬಂದಿಗೇ ಶಾಕ್: ಗಾಂಜಾ ಪತ್ತೆ

ಶಿವಮೊಗ್ಗ: ಕೈದಿಗೆ ಕೊಡಲು ತಂದಿದ್ದ ಹಣ್ಣು, ಬಟ್ಟೆಗಳನ್ನು ಕಾರಾಗೃಹ ಸಿಬ್ಬಂದಿ ತಪಾಸಣೆ ಮಾಡುವಾಗ ಗಾಂಜಾ ಪತ್ತೆಯಾದ ಘಟನೆ ಶಿವಮೊಗ್ಗದ ಸೆಂಟ್ರಲ್ ಜೈಲ್ ನಲ್ಲಿ ನಡೆದಿದೆ

ಈ ಕುರಿತಾಗಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ರಂಗನಾಥ ಪಿ. ಅವರು ಸಹಾಯಕ ಜೈಲರ್ ರಮೇಶ್ ಎಸ್.ಸಿ. ಅವರ ಮೂಲಕ ತುಂಗಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವಿಚಾರಣಾ ಬಂಧಿ ಸೈಯ್ಯದ್ ವಸೀಮ್ ನೋಡಲು ಬಂದಂತಹ  ಮೊಹ್ಮದ್ ಅಕ್ಬರ್, ಅಜ್ಗರ್ ಅಲಿ ಅವರನ್ನು ಕಾರಾಗೃಹ ಆಕ್ಸೆಸ್ ಕಂಟ್ರೋಲ್ ನಲ್ಲಿ ವಿಚಾರಿಸಲಾಗಿದೆ. ಅವರು ಕೈದಿಗೆ ನೀಡಲು ತಂದಿದ್ದ ಹಣ್ಣು ಮತ್ತು ಬಟ್ಟೆಗಳನ್ನು ತಪಾಸಣೆ ಮಾಡುವಾಗ ಎರಡು ಪ್ಯಾಂಟುಗಳ ಸೊಂಟದ ಪಟ್ಟಿಗಳಲ್ಲಿ ಅನುಮಾನಸ್ಪದ ವಸ್ತು 6 ಗ್ರಾಂ ಗಾಂಜಾ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಂಜಾ, ಎರಡು ಪ್ಯಾಂಟ್ ಗಳು, ಹೀರೋ ಕಂಪನಿಯ ದ್ವಿ-ಚಕ್ರ ವಾಹನ, ಎರಡು ಮೊಬೈಲ್ ಗಳು, ಹಾಗೂ 400ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಆರೋಪಿಗಳಾದ ಮೊಹ್ಮದ್ ಅಕ್ಬರ್, ಅಜ್ಗರ್ ಅಲಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular