HomeAstroಚಿಕ್ಕ ವಿಷ್ಯಕ್ಕೂ ಕಚ್ಚಾಡೋ ಈ ರಾಶಿಯವರಿಗೆ ಮೂಗಿನ ಮೇಲೆಯೇ ಇರುತ್ತೆ ಕೋಪ...!

ಚಿಕ್ಕ ವಿಷ್ಯಕ್ಕೂ ಕಚ್ಚಾಡೋ ಈ ರಾಶಿಯವರಿಗೆ ಮೂಗಿನ ಮೇಲೆಯೇ ಇರುತ್ತೆ ಕೋಪ…!

ಕೋಪಕ್ಕೆ ಬುದ್ದಿ ಕೊಡಬಾರದು ಅಂತಾ ದೊಡ್ಡವರು ಹೇಳ್ತಾರೆ. ಆದ್ರೆ ಅನೇಕರಿಗೆ ಕೋಪ ನಿಯಂತ್ರಣ ಮಾಡಿಕೊಳ್ಳೋದು ಕಷ್ಟ. ಸಣ್ಣ ಸಣ್ಣ ವಿಷ್ಯಕ್ಕೂ ಮೂಗು ಕೆಂಪಾಗುತ್ತೆ. ಕಣ್ಣು ದೊಡ್ಡದಾಗುತ್ತೆ. ಕೋಪ ನೆತ್ತಿ ಮೇಲೆ ಕಾಣಿಸಿಕೊಳ್ಳುತ್ತೆ. ನಿಮ್ಮ ಕೋಪ ಹಾಗೂ ನಿಮ್ಮ ರಾಶಿಗೆ ಸಂಬಂಧವಿದೆ. ಕೆಲ ರಾಶಿಯವರ ಸ್ವಭಾವವೇ ಹಾಗಿರುವ ಕಾರಣ ಅವರು ಕೋಪ ನಿಯಂತ್ರಿಸಿಕೊಳ್ಳೋದು ಕಷ್ಟ.

ಅತಿ ಬೇಗ ಕೋಪಗೊಳ್ಳುವವರಲ್ಲಿ ವೃಷಭ ರಾಶಿಯವರು ಸೇರಿದ್ದಾರೆ. ಇವರಿಗೆ ಅತ್ಯಂತ ಕ್ಷುಲ್ಲಕ ವಿಷ್ಯಕ್ಕೂ ಕೋಪ ಬರುತ್ತದೆ. ಇದು ಸರಿಯಿಲ್ಲ ಎನ್ನಿಸಿದ ತಕ್ಷಣ ಅವರು ಪ್ರತಿಕ್ರಿಯೆ ನೀಡುತ್ತಾರೆ. ಅನೇಕ ಬಾರಿ ಮುನಿಸಿಕೊಂಡ ಮೇಲೆ ತಪ್ಪಿನ ಅರಿವಾಗುತ್ತದೆ. ಆದ್ರೆ ಅಪ್ಪಿತಪ್ಪಿಯೂ ನನ್ನದೇ ತಪ್ಪು ಎಂಬುದನ್ನು ಇವರು ಒಪ್ಪೋದಿಲ್ಲ.

ಸಿಂಹ ರಾಶಿಯವರಗೂ ಅತಿ ಬೇಗ ಕೋಪ ಬರುತ್ತದೆ. ಇವರು ಕೋಪದಲ್ಲಿ ಮೂಗು ಕೊಯ್ದುಕೊಳ್ಳಲು ಸಿದ್ಧವಿರ್ತಾರೆ. ಹಾಗಂತ ತಮ್ಮ ತಪ್ಪನ್ನು ಇವರೂ ಒಪ್ಪಿಕೊಳ್ಳೋದಿಲ್ಲ. ಈ ರಾಶಿಯ ಸ್ನೇಹಿತರು ನಿಮಗಿದ್ದರೆ ಅವರಿಂದ ಸ್ವಲ್ಪ ದೂರ ಇರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಣ್ಣ ವಿಷ್ಯಕ್ಕೆ ದೊಡ್ಡ ರಾದ್ದಾಂತ ಮಾಡುವವರಲ್ಲಿ ಮಿಥುನ ರಾಶಿಯವರು ಮುಂದಿದ್ದಾರೆ. ಅವರಿಗೆ ಯಾವಾಗ ಕೋಪ ಬರುತ್ತೆ ಅನ್ನೋದೇ ಗೊತ್ತಾಗೋದಿಲ್ಲ. ಸಂಗಾತಿ ಜೊತೆ, ಕುಟುಂಬಸ್ಥರ ಜೊತೆ ಸದಾ ಗಲಾಟೆ ಮಾಡುವ ಇವರು ಜಗಳಗಂಟರು ಎಂದೇ ಬಿರುದು ಪಡೆದಿರುತ್ತಾರೆ.

ಇನ್ನು ಕನ್ಯಾ ರಾಶಿಯವರ ಕೋಪವನ್ನು ನಿಯಂತ್ರಿಸೋದು ಕಷ್ಟ. ಕೋಪದಲ್ಲಿ ಅವರು ಸಾಕಷ್ಟು ಯಡವಟ್ಟು ಮಾಡಿ ನಂತ್ರ ವಿಷಾದಿಸುತ್ತಾರೆ. ಅವರ ಕೋಪ ಅಪಾಯಕಾರಿ ಎಂಬುದು ಎಷ್ಟೋ ಬಾರಿ ಸಾಬೀತಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular