HomeLatest Newsತೂಕ ಕಡಿಮೆಯಾಗಲು ಸಹಾಯ ಮಾಡತ್ತೆ ಈ ಬೀಜಗಳು

ತೂಕ ಕಡಿಮೆಯಾಗಲು ಸಹಾಯ ಮಾಡತ್ತೆ ಈ ಬೀಜಗಳು

ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ ಬೀಜದಲ್ಲಿಯೂ ಸಾಕಷ್ಟು ಔಷಧಿ ಗುಣವಿದೆ. ಕೆಲವೊಂದು ಬೀಜಗಳು ನಮ್ಮ ತೂಕ ಕಡಿಮೆ ಮಾಡಲು ನೆರವಾಗುತ್ತವೆ.

ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಬೀಜ ಕಸದ ಬುಟ್ಟಿ ಸೇರುತ್ತೆ. ಆದ್ರೆ ಕಲ್ಲಂಗಡಿ ಬೀಜ ಬಹಳ ಒಳ್ಳೆಯದು. ಹಾಲು ಅಥವಾ ನೀರಿನ ಜೊತೆ ಸೇವನೆ ಮಾಡಬಹುದು. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾವಿನ ಗೊರಟೆಯನ್ನು ತಿನ್ನೋದಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಅದರ ಒಳಗಿರುವ ಬೀಜವನ್ನು ತೆಗೆದು ಪುಡಿ ಮಾಡಿಕೊಳ್ಳಿ. ಮಲಬದ್ಧತೆ ಕಾಣಿಸಿಕೊಂಡಾಗ  ಬೆಳಿಗ್ಗೆ ಅಥವಾ ರಾತ್ರಿ ನೀರಿನ ಜೊತೆ ಪುಡಿಯನ್ನು ಸೇವಿಸಿ. ಹೊಟ್ಟೆ ಸರಿಯಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ತೂಕ ಕಡಿಮೆಯಾಗಲು ದಾಳಿಂಬೆ ಬೀಜ ಸಹಕಾರಿ. ಜೊತೆಗೆ ಚರ್ಮ ಸಂಬಂಧಿ ಸಮಸ್ಯೆಯಿಂದಲೂ ನಮಗೆ ನೆಮ್ಮದಿ ಸಿಗುತ್ತದೆ.

ಹಲಸಿನ ಬೀಜದಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿ. ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಿಗ್ಗೆ ಇದನ್ನು ಸೇವನೆ ಮಾಡುವುದು ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular