ಉಡುಗೊರೆಯಾಗಿ ಸಿಗುವ ಈ ವಸ್ತುಗಳು ತರುತ್ತವೆ ಆರ್ಥಿಕ ಲಾಭ

ಶುಭ ಸಂದರ್ಭಗಳಲ್ಲಿ ಪ್ರೀತಿ ಪಾತ್ರರಿಗೆ ಸಾಮಾನ್ಯವಾಗಿ ಉಡುಗೊರೆಗಳನ್ನು ನೀಡುವ ರೂಢಿ ಇದೆ. ಅಂತ ಸಮಯದಲ್ಲಿ ಯಾವ ವಸ್ತುವನ್ನು ಉಡುಗೊರೆ ಮಾಡಬೇಕೆಂಬ ಗೊಂದಲ ಎಲ್ಲರನ್ನೂ ಕಾಡುತ್ತದೆ.

ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ರೆ ಉಡುಗೊರೆ ಪಡೆದ ವ್ಯಕ್ತಿಯ ಮನಸ್ಸು ಖುಷಿಗೊಳ್ಳುವ ಜೊತೆಗೆ ಮನೆಯಲ್ಲಿ ಏಳ್ಗೆಯಾಗುತ್ತದೆ. ಆರ್ಥಿಕ ವೃದ್ಧಿ ಜೊತೆಗೆ ಸುಖ, ಸಂತೋಷ ನೆಲೆಸಿರುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ಬೇಕಾಬಿಟ್ಟಿ ಉಡುಗೊರೆ ನೀಡುವುದಕ್ಕಿಂತ ಯಾವುದು ಒಳಿತು ಯಾವುದು ಕೆಡುಕು ಎಂಬುದನ್ನು ಅರಿತು ಗಿಫ್ಟ್ ನೀಡಿದ್ರೆ ಒಳ್ಳೆಯದು.

ಧಾರ್ಮಿಕ ಗ್ರಂಥಗಳ ಪ್ರಕಾರ ಮನೆಯಲ್ಲಿರುವ ಆನೆ ಸಂತೋಷ, ಸಮೃದ್ಧಿ, ಅಭ್ಯುದಯ, ಅದೃಷ್ಟವನ್ನು ತರುತ್ತದೆ. ವಾಸ್ತು ಪ್ರಕಾರ ಕಲಾತ್ಮಕ ಲೋಹದಿಂದ ಮಾಡಿದ ಆನೆ ಗಿಫ್ಟ್ ರೂಪದಲ್ಲಿ ಬಂದರೆ ಮನೆಯಲ್ಲಿ ಆದಾಯ ಹೆಚ್ಚುತ್ತದೆ. ಆನೆ ಮೂರ್ತಿಯ ಬದಲು ಪೇಂಟ್ ಮಾಡಿದ ಆನೆಯ ಚಿತ್ರವನ್ನೂ ನೀಡಬಹುದಾಗಿದೆ.

ಕುದುರೆಯನ್ನು ಉಡುಗೊರೆಯಾಗಿ ಪಡೆಯುವುದರಿಂದ ಮನೆಯಲ್ಲಿ ಆದಾಯ ಹಾಗೂ ಸಂತೋಷದಲ್ಲಿ ಹೆಚ್ಚಳವಾಗುತ್ತದೆ. ಹಾಗೆ ಬಿಳಿಯ ಕುದುರೆ ಚಿತ್ರ ಮಂಗಳಕರ ಎಂದು ಭಾವಿಸಲಾಗಿದೆ. ಗೃಹ ಪ್ರವೇಶ ಅಥವಾ ಮಂಗಳಕಾರ್ಯಕ್ಕೆ ಹೋದಾಗ ಬಿಳಿ ಬಣ್ಣದ ಕುದುರೆ ಚಿತ್ರವನ್ನು ಉಡುಗೊರೆಯಾಗಿ ನೀಡಿ.

ದ್ವಿಮುಖ ಗಣೇಶ ಮನೆಯಲ್ಲಿ ಸದಾ ಸಂತೋಷ ನೆಲೆಸಲು ಕಾರಣನಾಗ್ತಾನೆ. ಈ ಮೂರ್ತಿಯನ್ನು ಪ್ರವೇಶ ದ್ವಾರದ ಬಳಿ ಇಡುವುದು ಉತ್ತಮ. ದ್ವಿಮುಖ ಗಣೇಶ ಮೂರ್ತಿಯನ್ನು ಉಡುಗೊರೆಯಾಗಿ ನೀಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read