HomeKarnatakaರೈಲುಗಳಲ್ಲಿ ನಕಲಿ ಟಿಕೆಟ್ ತಡೆಗೆ ಮಹತ್ವದ ಕ್ರಮ: ವಿಶಿಷ್ಟ ಕ್ಯೂಆರ್ ಕೋಡ್ ಹೊಂದಿರುವ ಥರ್ಮಲ್ ಪ್ರಿಂಟರ್...

ರೈಲುಗಳಲ್ಲಿ ನಕಲಿ ಟಿಕೆಟ್ ತಡೆಗೆ ಮಹತ್ವದ ಕ್ರಮ: ವಿಶಿಷ್ಟ ಕ್ಯೂಆರ್ ಕೋಡ್ ಹೊಂದಿರುವ ಥರ್ಮಲ್ ಪ್ರಿಂಟರ್ ಮುದ್ರಿತ ಟಿಕೆಟ್ ವಿತರಣೆ

ಬೆಂಗಳೂರು: ರೈಲುಗಳಲ್ಲಿ ನಕಲಿ ಟಿಕೆಟ್ ತಡೆ ಉದ್ದೇಶದಿಂದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ವಿಶಿಷ್ಟ ಕ್ಯೂಆರ್ ಕೋಡ್ ಹೊಂದಿರುವ ಟಿಕೆಟ್ ವಿತರಿಸುತ್ತಿದೆ. ವಿಶೇಷವಾಗಿ ಇವುಗಳನ್ನು ಥರ್ಮಲ್ ಪ್ರಿಂಟರ್ ಗಳ ಮೂಲಕ ಮುದ್ರಣ ಮಾಡಲಾಗುತ್ತಿದೆ.

ಮೆಜೆಸ್ಟಿಕ್ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದ ಮುಖ್ಯ ದ್ವಾರದಲ್ಲಿರುವ ಎರಡು ಕೌಂಟರ್ ಗಳಲ್ಲಿ ಎರಡು ಥರ್ಮಲ್ ಪ್ರಿಂಟರ್ ಗಳ ಬಳಕೆ ಆರಂಭಿಸಲಾಗಿದೆ. ಕೆಆರ್ ಪುರಂ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಯಶವಂತಪುರ ರೈಲು ನಿಲ್ದಾಣಗಳಲ್ಲಿಯೂ ಈ ನೂತನ ಟಿಕೆಟ್ ವ್ಯವಸ್ಥೆ ಆರಂಭಿಸಲಾಗಿದ್ದು, ಭಾನುವಾರದಿಂದ ಥರ್ಮಲ್ ಪ್ರಿಂಟರ್ ಬಳಸಿ 100 ಟಿಕೆಟ್ ನೀಡಲಾಗಿತ್ತು. ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಮುಂದಿನ 10 ತಿಂಗಳಲ್ಲಿ ಎಲ್ಲಾ ವಿಭಾಗಗಳಲ್ಲಿ ಥರ್ಮಲ್ ಪ್ರಿಂಟರ್ ಬಳಕೆ ಮಾಡಲಾಗುವುದು.

ಇತ್ತೀಚಿಗೆ ಮುದ್ರಣ ಯಂತ್ರಗಳನ್ನು ಬಳಸಿ ನಕಲಿ ಟಿಕೆಟ್ ಗಳನ್ನು ಮಾಡುವ ಪ್ರಕರಣ ಹೆಚ್ಚಾಗಿದ್ದು, ಇದನ್ನು ತಡೆಯಲು ರೈಲ್ವೆ ಇಲಾಖೆ ಥರ್ಮಲ್ ಪ್ರಿಂಟರ್ ಬಳಸಿ ಟಿಕೆಟ್ ಮುದ್ರಿಸುತ್ತಿದೆ. ಪ್ರತಿ ಟಿಕೆಟ್ ಗೆ ವಿಶಿಷ್ಟವಾದ ಕ್ಯೂಆರ್ ಕೋಡ್ ಇರಲಿದ್ದು, ತಪಾಸಣೆ ಅಧಿಕಾರಿಗಳು ತಮ್ಮ ಆ್ಯಪ್ ಮೂಲಕ ಇದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಕೇವಲ ಮೂರು ಸೆಕೆಂಡ್ ನಲ್ಲಿ ಥರ್ಮಲ್ ಪ್ರಿಂಟರ್ ಟಿಕೆಟ್ ನೀಡುತ್ತದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular