ಊಟವಾದ ತಕ್ಷಣ ಕೋಲ್ಡ್‌ ವಾಟರ್‌ ಕುಡಿಯುವುದರಿಂದ ಇದೆ ಈ ಅಪಾಯ..…! 

ಬಿರು ಬೇಸಿಗೆ, ಕೂತಲ್ಲಿ ನಿಂತಲ್ಲಿ ಹರಿಯುವ ಬೆವರು, ಈ ಸಮಯದಲ್ಲಿ ತಣ್ಣಗೇನಾದ್ರೂ ಕುಡಿಯೋಣ ಅನಿಸೋದು ಸಹಜ. ಪ್ರಿಡ್ಜ್‌ನಲ್ಲಿರೋ ನೀರು, ತಂಪು ಪಾನೀಯಗಳು, ಐಸ್ ಕ್ರೀಮ್‌ ಇತ್ಯಾದಿಗಳನ್ನು ಸವಿಯಲು ಇಷ್ಟವಾಗುತ್ತದೆ. ಆದ್ರೆ ಊಟದ ನಂತರ ಫ್ರಿಡ್ಜ್‌ನಲ್ಲಿಟ್ಟಿರೋ ತಣ್ಣಗಿನ ನೀರನ್ನು ಕುಡಿಯಬೇಡಿ. ಅಕಸ್ಮಾತ್‌ ಕುಡಿದರೆ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ.

ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ: ಊಟದ ನಂತರ ಫ್ರಿಡ್ಜ್‌ನಲ್ಲಿರೋ ತಣ್ಣೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಕೊಬ್ಬಿನಂಶ ಹಾಗೆಯೇ ಉಳಿದು ಹೋಗುತ್ತದೆ. ತಿಂದಿದ್ದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಪರಿಣಾಮ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗಬಹುದು.

ಅಜೀರ್ಣ ಸಮಸ್ಯೆ: ತಣ್ಣೀರು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಆಹಾರದೊಂದಿಗೆ ಕೋಲ್ಡ್‌ ವಾಟರ್‌ ಬೆರೆತಾಗ ಅದರಲ್ಲಿರುವ ಕೊಬ್ಬಿನಂಶ ಗಟ್ಟಿಯಾಗಿಬಿಡುತ್ತದೆ. ಮತ್ತದನ್ನು ಜೀರ್ಣಿಸಿಕೊಳ್ಳಲು ದೇಹ ಹೆಣಗಾಡುತ್ತದೆ.

ತಲೆ ತಿರುಗುವುದು: ದೇಹದ ಅಂಗಗಳಿಗೆ, ವಿಶೇಷವಾಗಿ ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ ತಲೆ ತಿರುಗಿದ ಅನುಭವವಾಗುತ್ತದೆ. ತಣ್ಣೀರು ದೇಹದ ಚಯಾಪಚಯಕ್ಕೆ ಅಡ್ಡಿಪಡಿಸುತ್ತದೆ ಮತ್ತು ತಾಪಮಾನದ ಹಠಾತ್ ಬದಲಾವಣೆಯು ನಿಮ್ಮ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.

ಮೆದುಳಿನ ಘನೀಕರಣ: ತಣ್ಣೀರು ತಲೆನೋವು ಅಥವಾ ಮೈಗ್ರೇನ್‌ಗೆ ಕಾರಣವಾಗಬಹುದು. ಯಾಕಂದ್ರೆ ಕೋಲ್ಡ್‌ ವಾಟರ್‌ ಕುಡಿಯೋದ್ರಿಂದ  ಶಾರೀರಿಕ ಕಾರ್ಯಗಳು ದುರ್ಬಲಗೊಳ್ಳುತ್ತವೆ. ಇದು ನಿಮ್ಮ ಮೆದುಳಿನ ಕಾರ್ಯವನ್ನು ಫ್ರೀಜ್ ಮಾಡುತ್ತದೆ ಮತ್ತು ತಲೆತಿರುಗುವಿಕೆಯನ್ನು ಪ್ರಚೋದಿಸುತ್ತದೆ.

ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ : ತಣ್ಣಗಿನ ನೀರು ಕುಡಿಯುವುದರಿಂದ ನರಗಳ ಕಾರ್ಯಕ್ಕೆ ಅಡ್ಡಿಯಾಗಬಹುದು. ಹೃದಯ ಬಡಿತವನ್ನು ಸ್ಥಿರವಾಗಿಡಲು ಸಹಾಯ ಮಾಡುವ ನರಗಳ ಕಾರ್ಯಕ್ಕೆ ಅಡ್ಡಿಯಾದರೆ ಹೃದಯ ಬಡಿತವೇ ನಿಧಾನವಾಗುವ ಅಪಾಯವಿರುತ್ತದೆ.

ಪೋಷಕಾಂಶಗಳ ಕೊರತೆ: ಫ್ರಿಡ್ಜ್‌ ವಾಟರ್‌ ಕುಡಿದಾಗ ನಿಮ್ಮ ದೇಹವು ಸಾಮಾನ್ಯ ತಾಪಮಾನಕ್ಕೆ ಮರಳಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಶಕ್ತಿಯನ್ನು ಬಳಸಲಾಗುವುದಿಲ್ಲ. ಇದು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ.

ಗಂಟಲು ನೋವು: ತಣ್ಣೀರು ಅನ್ನನಾಳದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಅದು ಅನೇಕ ಸೋಂಕುಗಳಿಗೆ ಕಾರಣವಾಗಬಹುದು. ಇದರಿಂದ ಗಂಟಲು ನೋವು ಕೂಡ ಶುರುವಾಗಬಹುದು.

ಕಿರಿದಾದ ಕರುಳು : ತಣ್ಣೀರು ಕರುಳಿನ ಗೋಡೆಯನ್ನು ಕಿರಿದಾಗುವಂತೆ ಮಾಡುವುದರಿಂದ ಆಹಾರ ಹೀರಿಕೊಳ್ಳುವಿಕೆಗೆ ತೊಂದರೆಯಾಗುತ್ತದೆ. ಇದರಿಂದ  ಆಹಾರದಲ್ಲಿರುವ ಎಣ್ಣೆಯ ಅಂಶ ಹೆಪ್ಪುಗಟ್ಟುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ.

ಬಾಯಾರಿಕೆ ಉಲ್ಬಣ: ತಣ್ಣೀರು ನಿಮ್ಮ ಬಾಯಾರಿಕೆಯನ್ನು ಹೆಚ್ಚಿಸುತ್ತದೆ. ಹೆಚ್ಹೆಚ್ಚು ನೀರು ಅಥವಾ ಪಾನೀಯಗಳನ್ನು ಕುಡಿಯುವಂತೆ ಮಾಡುತ್ತದೆ. ಇದು ದೇಹದ ಅಸಮತೋಲನಕ್ಕೆ ಕಾರಣವಾಗುತ್ತದೆ. ವ್ಯಾಯಾಮದ ನಂತರ ಕೋಲ್ಡ್‌ ವಾಟರ್‌ ಬದಲು ನಾರ್ಮಲ್‌ ವಾಟರ್‌ ಅನ್ನೇ ಕುಡಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read