HomeBeautyಕೂದಲಿನ ಈ ಎಲ್ಲಾ ಸಮಸ್ಯೆಗೆ ಇದೆ 'ಪರಿಹಾರ'

ಕೂದಲಿನ ಈ ಎಲ್ಲಾ ಸಮಸ್ಯೆಗೆ ಇದೆ ‘ಪರಿಹಾರ’

ಜೀವನ ಶೈಲಿ, ಕಲುಷಿತ ವಾತಾವರಣ ಕೂದಲುದುರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣಾಗ್ತಿದೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಬಿಳಿ ಕೂದಲು, ಕೂದಲು ಉದುರುವುದು ಕಾಡ್ತಿದೆ. ಇದಕ್ಕೆ ಮನೆಯಲ್ಲಿಯೇ ಸಿಗುವ ವಸ್ತುವಿನಿಂದ ಪರಿಹಾರ ಕಂಡುಕೊಳ್ಳಬಹುದು.

ಕೂದಲ ಸಮಸ್ಯೆ ಪರಿಹಾರವಾಗಬೇಕೆಂದ್ರೆ ಪ್ರತಿನಿತ್ಯ ನೆಲ್ಲಿಕಾಯಿ ತಿನ್ನಬೇಕು. ಇದು ನಮ್ಮ ಆರೋಗ್ಯಕ್ಕೆ ಮಾತ್ರ ಒಳ್ಳೆಯದಲ್ಲ. ಬದಲಾಗಿ ನಮ್ಮ ಕೂದಲಿಗೂ ಅತ್ಯುತ್ತಮ. ಇದನ್ನ ನಿಯಮಿತವಾಗಿ ಸೇವಿಸೋದ್ರಿಂದ ಕೂದಲು, ದಟ್ಟ, ಉದ್ದ ಹಾಗೂ ಕಪ್ಪಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಈ ನೆಲ್ಲಿಕಾಯಿ ದೂರ ಮಾಡಬಲ್ಲದು. ಕೂದಲಿಗೆ ಆಗಾಗ ನೆಲ್ಲಿ ಪೇಸ್ಟ್‌ ಮಾಡಿ ಹಚ್ಚಿಕೊಳ್ಳುವುದ್ರಿಂದಲೂ ಸಾಕಷ್ಟು ಪ್ರಯೋಜನವಿದೆ.

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರೋದ್ರಿಂದ, ನಿಮ್ಮ ಕೂದಲನ್ನ ಬೇರೆ ಬೇರೆ ಸೊಂಕಿನಿಂದಲೂ ದೂರ ಇಡುತ್ತದೆ. ಜೊತೆಗೆ ಕೂದಲಿನ ಬೇರನ್ನ ಕೂಡಾ ಗಟ್ಟಿಗೊಳಿಸುತ್ತದೆ. ನೆಲ್ಲಿಕಾಯಿಯ ನೀರಿನಿಂದ ನಿಮ್ಮ ತಲೆಯ ಕೂದಲನ್ನ ತೊಳೆದುಕೊಳ್ಳುವುದರಿಂದ ಕೂದಲಿನ ಬಣ್ಣ ಬಿಳಿಯಾಗದಿರುವಂತೆ ತಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular