HomeHealthಪದೇ ಪದೇ ಬಾತ್ ರೂಂಗೆ ಹೋಗುವ ಸಮಸ್ಯೆಗೆ ಮನೆಯಲ್ಲೇ ಇದೆ ʼಪರಿಹಾರʼ

ಪದೇ ಪದೇ ಬಾತ್ ರೂಂಗೆ ಹೋಗುವ ಸಮಸ್ಯೆಗೆ ಮನೆಯಲ್ಲೇ ಇದೆ ʼಪರಿಹಾರʼ

ಕೆಲವರಿಗೆ ಪದೇ ಪದೇ ಮೂತ್ರ ಬಂದಂತಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಆದ್ರೆ ಇದು ಸಾರ್ವಜನಿಕ ಪ್ರದೇಶದಲ್ಲಿ ಮುಜುಗರ ತರಿಸುವುದಲ್ಲದೆ ಕಿರಿಕಿರಿಯನ್ನುಂಟು ಮಾಡುತ್ತದೆ. ಪದೇ ಪದೇ ಮೂತ್ರಕ್ಕೆ ಹೋಗುವವರು ಚಿಂತೆ ಮಾಡಬೇಕಾಗಿಲ್ಲ. ಮನೆ ಮದ್ದಿನಿಂದ ನಿಮ್ಮ ಈ ಹೇಳಿಕೊಳ್ಳಲಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಒಂದು ಚಮಚ ತುಳಸಿ ರಸವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಸರು ದೇಹಕ್ಕೆ ನ್ಯೂಟ್ರಿಷನ್ ನೀಡುತ್ತದೆ. ಅಲ್ಲದೆ ಮೂತ್ರಪಿಂಡಕ್ಕೆ ಸಂಬಂಧಪಟ್ಟ ಸೋಂಕನ್ನು ನಿವಾರಣೆ ಮಾಡುತ್ತದೆ. ಆಹಾರದಲ್ಲಿ ಮೊಸರನ್ನು ಬಳಸಿದ್ರೆ ಉಪಯುಕ್ತ.

ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ತೆಯ್ದು, ಪ್ರತಿದಿನ ನೀರಿನ ಜೊತೆ ಎರಡು ಬಾರಿ ಸೇವನೆ ಮಾಡುವುದರಿಂದ ಮೂತ್ರ ಸಮಸ್ಯೆ ಕಡಿಮೆಯಾಗುತ್ತದೆ.

ಸಿಹಿ ಗುಂಬಳಕಾಯಿಯ ಬೀಜವನ್ನು ಬೆಳಿಗ್ಗೆ ಮತ್ತು ರಾತ್ರಿ ತಿನ್ನುವುದರಿಂದ ಪದೇ ಪದೇ ಮೂತ್ರಕ್ಕೆ ಹೋಗುವುದು ನಿಲ್ಲುತ್ತದೆ.

ನೇರಳೆ ಹಣ್ಣಿನ ರಸವನ್ನು ನೀರಿನ ಜೊತೆ ಪ್ರತಿದಿನ ಸೇವನೆ ಮಾಡುವುದು ಒಳ್ಳೆಯದು.

ಮೆಂತ್ಯೆಯಲ್ಲಿರುವ ನ್ಯೂಟ್ರಿಷನ್, ಫೈಬರ್ ಹಾಗೂ ಮಿನರಲ್ ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ.

ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣದ ಅಂಶ ಹಾಗೂ ನ್ಯೂಟ್ರಿಷಿಯನ್ ಮೂತ್ರಪಿಂಡವನ್ನು ಆರೋಗ್ಯವಾಗಿರಿಸುತ್ತದೆ. ಡಿನ್ನರ್ ನಲ್ಲಿ ಇದನ್ನು ಬಳಸಿದ್ರೆ ರಾತ್ರಿ ಪದೇ ಪದೇ ಹೊರಗೆ ಹೋಗುವುದು ತಪ್ಪುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular