ಬಾಹ್ಯಾಕಾಶದ ರಹಸ್ಯವನ್ನೆಲ್ಲ ಬಹಿರಂಗಪಡಿಸಲಿದೆ ವಿಶ್ವದ ಅತಿದೊಡ್ಡ ಕ್ಯಾಮರಾ…..!

ಬಾಹ್ಯಾಕಾಶದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಅವನ್ನೆಲ್ಲ ಪತ್ತೆ ಮಾಡುವುದು ಅಸಾಧ್ಯವಾದ ಕೆಲಸ. ಕೆಲವು ನಿಗೂಢ ಸಂಗತಿಗಳನ್ನು ಇದುವರೆಗೆ ಯಾರಿಂದಲೂ ಬಯಲು ಮಾಡಲು ಸಾಧ್ಯವಾಗಿಲ್ಲ. ಆದ್ರೆ ಮನುಷ್ಯರದ್ದು ಹಠ ಬಿಡದ ಪ್ರಯತ್ನ. ಒಂದಿಲ್ಲೊಂದು ಹೊಸ ಹೊಸ ಆವಿಷ್ಕಾರಗಳ ಮೂಲಕ ಆಗಸದ ಆಸಕ್ತಿದಾಯಕ ಸಂಗತಿಗಳನ್ನು ಹುಡುಕುತ್ತಲೇ ಇರುತ್ತಾರೆ.

ಇದೀಗ ಜಗತ್ತಿನ ರಹಸ್ಯಗಳನ್ನು ತಿಳಿಯಲು ವಿಜ್ಞಾನಿಗಳು ಅತಿದೊಡ್ಡ ಡಿಜಿಟಲ್ ಕ್ಯಾಮೆರಾವನ್ನು ಸಿದ್ಧಪಡಿಸಿದ್ದಾರೆ. ಅದರ ರೆಸಲ್ಯೂಶನ್ 3.2 ಬಿಲಿಯನ್ ಪಿಕ್ಸೆಲ್ಗಳು. ಈ ಬಾಹುಬಲಿ ಕ್ಯಾಮೆರಾ ತಯಾರಿಸಲು 9 ವರ್ಷಗಳೇ ಬೇಕಾಯಿತು.

ವಿಶ್ವದ ಅತಿದೊಡ್ಡ ಡಿಜಿಟಲ್ ಕ್ಯಾಮೆರಾ

ಲಾರ್ಜ್ ಸಿನೊಪ್ಟಿಕ್ ಸರ್ವೆ ಟೆಲಿಸ್ಕೋಪ್ (ಎಲ್‌ಎಸ್‌ಎಸ್‌ಟಿ) ಹೆಸರಿನ ಈ ಕ್ಯಾಮೆರಾ ಬಾಹ್ಯಾಕಾಶದ ರಹಸ್ಯಗಳನ್ನು ತಿಳಿಯಲು ಮಾನವರು ತಯಾರಿಸಿದ ಅತಿದೊಡ್ಡ ಡಿಜಿಟಲ್ ಕ್ಯಾಮೆರಾ ಎನಿಸಿಕೊಂಡಿದೆ. ಇದನ್ನು ಚಿಲಿಯ ವೆರಾ ರೂಬಿನ್ ಅಬ್ಸರ್ವೇಟರಿಯಲ್ಲಿ ಸ್ಥಾಪಿಸಲಾಗುವುದು. ಶೀಘ್ರದಲ್ಲೇ ಈ ಕ್ಯಾಮರಾ ಮೂಲಕ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ಕೆಲಸ ನಡೆಯಲಿದೆ.

ಕ್ಯಾಮೆರಾ ಏನು ಮಾಡುತ್ತದೆ?

ಈ ಸೂಪರ್ ಕ್ಯಾಮೆರಾ ಬ್ರಹ್ಮಾಂಡದ ರಚನೆ, ಬ್ರಹ್ಮಾಂಡದ ವಿಸ್ತರಣೆ, ಸೌರವ್ಯೂಹ, ನಕ್ಷತ್ರಪುಂಜದ ರಚನೆ, ಡಾರ್ಕ್ ಎನರ್ಜಿ, ಡಾರ್ಕ್ ಮ್ಯಾಟರ್‌ನ ಸ್ವರೂಪ ಮತ್ತು ವಿತರಣೆಯ ಕುರಿತು 60 ಪೆಟಾಬೈಟ್ ಡೇಟಾವನ್ನು ಸಂಗ್ರಹಿಸುತ್ತದೆ. ಈ ಕ್ಯಾಮೆರಾವು 5.1 ಅಡಿ ಅಗಲದ ಆಪ್ಟಿಕಲ್ ಲೆನ್ಸ್‌ ಹೊಂದಿದೆ. ಈ ಕ್ಯಾಮೆರಾದಲ್ಲಿನ ಫಿಲ್ಟರ್‌ಗಳು ನೇರಳಾತೀತದಿಂದ ಸಮೀಪ ಇನ್‌ಫ್ರಾರೆಡ್‌ಗೆ ವಿಭಿನ್ನ ತರಂಗಾಂತರಗಳಲ್ಲಿ ಬೆಳಕನ್ನು ನೋಡಲು ಸ್ವಯಂಚಾಲಿತವಾಗಿ ಬದಲಾಗುತ್ತವೆ..

ಇದರ ಬೆಲೆ ರೋಲ್ಸ್ ರಾಯ್ಸ್‌ಗಿಂತಲೂ ಅಧಿಕ!

ಈ ಕ್ಯಾಮೆರಾದ ಬೆಲೆ ಕೋಟಿಗಳ ಲೆಕ್ಕದಲ್ಲಿದೆ. ಈ ಕ್ಯಾಮೆರಾದ ತೂಕ 2,812 ಕೆ.ಜಿಯಷ್ಟಿದೆ. ಕ್ಯಾಮೆರಾದ ಫೋಕಲ್ ಪ್ಲೇನ್‌ಗೆ ಜೋಡಿಸಲಾದ 21 ರಾಫ್ಟ್‌ಗಳಲ್ಲಿ ಒಂದನ್ನು ಮಾರಾಟ ಮಾಡಿದ್ರೂ ಜಗತ್ತಿನ ದುಬಾರಿ ಕಾರನ್ನು ಖರೀದಿಸಬಹುದು. ಈ ಕಾರಿನ ಬೆಲೆ 4 ಕೋಟಿ ರೂಪಾಯಿಯಷ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read