HomeEntertainment'ಕಟ್ಲೆ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಕಟ್ಲೆ’ ಚಿತ್ರದ ವಿಡಿಯೋ ಹಾಡು ರಿಲೀಸ್

ಶ್ರೀ ವಿಧ ನಿರ್ದೇಶನದ ಕೆಂಪೇಗೌಡ ಅಭಿನಯದ ‘ಕಟ್ಲೆ’ ಚಿತ್ರದ ”ಯಾರೋ ನಾ ಕಾಣೆ” ಎಂಬ ವಿಡಿಯೋ ಹಾಡು ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ  ಟಿಪ್ಪು ಧ್ವನಿಯಾಗಿದ್ದು, ಶ್ರೀಧರ್ ವಿ ಸಂಭ್ರಮ ಸಂಗೀತ ಸಂಯೋಜನೆ ನೀಡಿದ್ದಾರೆ. ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಭರತ್ ಗೌಡ ಮೂವೀಸ್ ಮೂವೀಸ್ ಬ್ಯಾನರ್ ನಲ್ಲಿ ಭರತ್ ಗೌಡ ನಿರ್ಮಾಣ ಮಾಡಿದ್ದು, ಕೆಂಪೇಗೌಡ ಅವರಿಗೆ ಜೋಡಿಯಾಗಿ ಅಮೃತ ಅಭಿನಯಿಸಿದ್ದಾರೆ. ಇನ್ನುಳಿದಂತೆ ಹರೀಶ್ ರಾಜ್, ಹರ್ಷಿಕಾ, ಟೆನ್ನಿಸ್ ಕೃಷ್ಣ, ಬಿರಾದಾರ್, ಉಮೇಶ್, ಯತಿ ರಾಜ್, ಶರಣ್ಯ ಪಾತ್ರ ವರ್ಗದಲ್ಲಿದ್ದಾರೆ. ಚೆಲುವಮೂರ್ತಿ ಸಂಕಲನ ಹಾಗೂ ವೇದಾರ್ಥ್ ಜಯಕುಮಾರ್ ಅವರ  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular