ಪಿ ವಿ ಆರ್ ಸ್ವಾಮಿ ನಿರ್ದೇಶನದ ಪ್ರದೀಪ್ ಪೂಜಾರಿ ಅಭಿನಯದ “s.? ಸೈಲೆನ್ಸ್” ಚಿತ್ರದ ‘ಮನಸ್ಸನ್ನು ಕದ್ದ ನನ್ನ ಗೆಳತಿಯು ನೀನು’ ಎಂಬ ವಿಡಿಯೋ ಹಾಡು ಇದೇ ಜನವರಿ ಹತ್ತಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು SKM ಮೂವೀಸ್ ಬ್ಯಾನರ್ ನಲ್ಲಿ ಮೋಹನ್ ಕುಮಾರ್ SK ನಿರ್ಮಾಣ ಮಾಡಿದ್ದು, ಪ್ರದೀಪ್ ಪೂಜಾರಿ ಸೇರಿದಂತೆ ಉಗ್ರಂ. ನಿಕಿತಾ ಸ್ವಾಮಿ, ಮಂಗಳೂರು ಮೀನನಾಥ, ಕಾಮಿಡಿ ಕಿಲಾಡಿ ಸದಾನಂದ, ಸುಶ್ಮಿತಾ ಗೌಡ, ವಿಂಧ್ಯಾ, ಮೀರಾ, ಪ್ರೀತಿ, ಪ್ರಜ್ವಲ್ ತೆರೆ ಹಂಚಿಕೊಂಡಿದ್ದಾರೆ. ರಾಜ್ ಭಾಸ್ಕರ್ ಸಂಗೀತ ಸಂಯೋಜನೆ ನೀಡಿದ್ದು, ಸಂಜೀವ್ ರೆಡ್ಡಿ ಸಂಕಲನ, ಸುಧಾ, ಚಿಕ್ಕೇಗೌಡ, ಮಹೇಶ್ ವೇಷಭೂಷಣ, PVR ಸ್ವಾಮಿ ಛಾಯಾಗ್ರಹಣವಿದೆ. ಪ್ರಸನ್ನ ಪನ್ನಕನಹಳ್ಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.