ಬೆಂಗಳೂರು: ಇಂದಿನ ದಿನಗಳಲ್ಲಿ ಸ್ಮಾರ್ಟ್’ಫೋನ್’ನಿಂದ ಹಿಡಿದು ಲ್ಯಾಪ್’ಟಾಪ್’ವರೆಗೆ ಎಲ್ಲದರಲ್ಲೂ ಟೈಪ್-ಸಿ (USB Type-C) ಪೋರ್ಟ್ ಸರ್ವೇಸಾಮಾನ್ಯವಾಗಿದೆ. ಆದರೆ, ನಾವು ಈ ಪೋರ್ಟ್ ಅನ್ನು ಕೇವಲ ಬ್ಯಾಟರಿ ಚಾರ್ಜ್ ಮಾಡಲು ಮಾತ್ರ ಬಳಸುತ್ತಿದ್ದೇವೆ. ವಾಸ್ತವವಾಗಿ, ಈ ಪುಟ್ಟ ಪೋರ್ಟ್ನಲ್ಲಿ ಅಡಗಿರುವ ಅದ್ಭುತ ತಾಂತ್ರಿಕ ಸಾಮರ್ಥ್ಯಗಳ ಬಗ್ಗೆ ಶೇ. 90 ರಷ್ಟು ಬಳಕೆದಾರರಿಗೆ ಅರಿವೇ ಇಲ್ಲ!
ನಿಮ್ಮ ಸ್ಮಾರ್ಟ್ಫೋನ್ ಅನ್ನು ಪವರ್ ಬ್ಯಾಂಕ್ ಆಗಿ ಬಳಸುವುದರಿಂದ ಹಿಡಿದು, ದೊಡ್ಡ ಪರದೆಯ ಮೇಲೆ ಸಿನಿಮಾ ನೋಡುವವರೆಗೆ ಟೈಪ್-ಸಿ ಪೋರ್ಟ್ನಿಂದ ಏನೆಲ್ಲಾ ಮಾಡಬಹುದು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ
- ರಿವರ್ಸ್ ಚಾರ್ಜಿಂಗ್ (Reverse Charging): ನಿಮ್ಮ ಸ್ನೇಹಿತರ ಫೋನ್ನಲ್ಲಿ ಚಾರ್ಜ್ ಖಾಲಿಯಾಗಿದ್ದರೆ, ಟೈಪ್-ಸಿ ಟು ಟೈಪ್-ಸಿ ಕೇಬಲ್ ಬಳಸಿ ನಿಮ್ಮ ಫೋನ್ನಿಂದ ಅವರ ಫೋನ್ಗೆ ಚಾರ್ಜ್ ಮಾಡಬಹುದು. ಇದು ಪವರ್ ಬ್ಯಾಂಕ್ನಂತೆ ಕೆಲಸ ಮಾಡುತ್ತದೆ.
- ಟಿವಿ ಅಥವಾ ಮಾನಿಟರ್ ಕನೆಕ್ಷನ್: ನಿಮ್ಮ ಫೋನ್ನಲ್ಲಿರುವ ಸಿನಿಮಾ ಅಥವಾ ಫೋಟೋಗಳನ್ನು ದೊಡ್ಡ ಪರದೆಯ ಮೇಲೆ ನೋಡಬೇಕೆ? ಟೈಪ್-ಸಿ ಟು HDMI ಕೇಬಲ್ ಬಳಸಿ ನಿಮ್ಮ ಮೊಬೈಲ್ ಅನ್ನು ನೇರವಾಗಿ ಟಿವಿ ಅಥವಾ ಮಾನಿಟರ್ಗೆ ಕನೆಕ್ಟ್ ಮಾಡಬಹುದು.
- ಕೀಬೋರ್ಡ್ ಮತ್ತು ಮೌಸ್ ಬಳಕೆ: ನಿಮ್ಮ ಫೋನ್ನಲ್ಲಿ ವೇಗವಾಗಿ ಟೈಪ್ ಮಾಡಬೇಕೆ ಅಥವಾ ಗೇಮ್ ಆಡಬೇಕೆ? OTG ಅಡಾಪ್ಟರ್ ಬಳಸಿ ಟೈಪ್-ಸಿ ಪೋರ್ಟ್ ಮೂಲಕ ಮೌಸ್ ಅಥವಾ ಕೀಬೋರ್ಡ್ ಅನ್ನು ಮೊಬೈಲ್ಗೆ ಕನೆಕ್ಟ್ ಮಾಡಿ ಕಂಪ್ಯೂಟರ್ನಂತೆ ಬಳಸಬಹುದು.
- ಹೈ-ಸ್ಪೀಡ್ ಡೇಟಾ ಟ್ರಾನ್ಸ್ಫರ್: ಸಾಮಾನ್ಯ USB ಪೋರ್ಟ್ಗಳಿಗಿಂತ ಟೈಪ್-ಸಿ ಪೋರ್ಟ್ ಅತ್ಯಂತ ವೇಗವಾಗಿ ಡೇಟಾವನ್ನು ವರ್ಗಾಯಿಸುತ್ತದೆ. ದೊಡ್ಡ ಫೈಲ್ಗಳನ್ನು ಕ್ಷಣಾರ್ಧದಲ್ಲಿ ಪೆನ್ಡ್ರೈವ್ ಅಥವಾ ಹಾರ್ಡ್ ಡಿಸ್ಕ್ಗೆ ಕಳುಹಿಸಬಹುದು.
- ಆಡಿಯೋ ಔಟ್ಪುಟ್: ಈಗಿನ ಫೋನ್ಗಳಲ್ಲಿ 3.5mm ಹೆಡ್ಫೋನ್ ಜಾಕ್ ಇರುವುದಿಲ್ಲ. ಅಂತಹ ಸಮಯದಲ್ಲಿ ಟೈಪ್-ಸಿ ಇಯರ್ಫೋನ್ಗಳು ಅಥವಾ ಅಡಾಪ್ಟರ್ಗಳನ್ನು ಬಳಸಿ ಉತ್ತಮ ಗುಣಮಟ್ಟದ ಸಂಗೀತವನ್ನು ಆನಂದಿಸಬಹುದು.

