HomeEntertainmentರಿಲೀಸ್ ಆಯ್ತು 'ಅರ್ಜುನ' ಕಿರು ಚಿತ್ರದ ಚಿತ್ರದ ಟ್ರೈಲರ್

ರಿಲೀಸ್ ಆಯ್ತು ‘ಅರ್ಜುನ’ ಕಿರು ಚಿತ್ರದ ಚಿತ್ರದ ಟ್ರೈಲರ್

ಶ್ರೀಧರ್ ರಂಗಾಯಣ ನಿರ್ದೇಶಿಸಿರುವ ಅರ್ಜುನ ಎಂಬ ಕಿರು ಚಿತ್ರದ ಟ್ರೈಲರ್ ಇಂದು ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಿರು ಚಿತ್ರ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡುವುದಾಗಿ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಈ ಕಿರು ಚಿತ್ರವನ್ನು a.r  ಸ್ಟುಡಿಯೋ ಮತ್ತು ಶ್ರೀಶಯನ ಪಿಚ್ಚರ್ಸ್ ಬ್ಯಾನರ್ ನಲ್ಲಿ ಆದರ್ಶ ರಾವ್ ಮತ್ತು ಶ್ರೀಧರ್ ರಂಗಾಯಣ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಶ್ರೀಧರ್ ರಂಗಾಯಣ, ವೈಷ್ಣವಿ, ಅಕ್ಷತಾ ಕುಮುಟಾ, ಯತೀಶ್ ಏನ್ ಕೊಳ್ಳೇಗಾಲ ಅಭಿನಯಿಸಿದ್ದು, ಪ್ರಿನ್ಸ್ ಜೋಸೆಫ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular