HomeEntertainmentಇಂದು ಬಿಡುಗಡೆಯಾಗಲಿದೆ 'ರಾಮನ ಅವತಾರ' ಚಿತ್ರದ ಟ್ರೈಲರ್

ಇಂದು ಬಿಡುಗಡೆಯಾಗಲಿದೆ ‘ರಾಮನ ಅವತಾರ’ ಚಿತ್ರದ ಟ್ರೈಲರ್

ವಿಕಾಸ್ ಪಂಪಾಪತಿ ನಿರ್ದೇಶನದ ರಿಷಿ ಅಭಿನಯದ ಬಹುನಿರೀಕ್ಷಿತ ‘ರಾಮನ ಅವತಾರ’ ಇದೆ ಮೇ ಹತ್ತಕ್ಕೆ ಬಿಡುಗಡೆಯಾಗಲಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಚಿತ್ರತಂಡ ಇಂದು ರಾತ್ರಿ 7 11ಕ್ಕೆ  ಟ್ರೈಲರ್ ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಚಿತ್ರವನ್ನು ಸ್ಟಾರ್ ಫ್ಯಾಬ್ ಬ್ಯಾನರ್ ನಲ್ಲಿ ಅಮರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದು, ರಿಷಿ ಸೇರಿದಂತೆ ಪ್ರಣಿತ ಶುಭಾಷ್, ಶುಭ್ರ ಅಯ್ಯಪ್ಪ, ಅರುಣ್ ಸಾಗರ್, ಮತ್ತು ಅನಿರುದ್ಧ ಆಚಾರ್ಯ, ಬಣ್ಣ ಹಚ್ಚಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅಮರ್ನಾಥ್ ಸಂಕಲನ, ಕಿರಣ್ ಮನೋಹರ್ ನೃತ್ಯ ನಿರ್ದೇಶನ, ಚೇತನ್ ಆರ್ ಡಿಸೋಜ  ಮತ್ತು ಮಂಜು ನಾಗಪ್ಪ  ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular