HomeEntertainmentರಿಲೀಸ್ ಆಯ್ತು 'ಘೋಸ್ಟ್' ಟ್ರೈಲರ್

ರಿಲೀಸ್ ಆಯ್ತು ‘ಘೋಸ್ಟ್’ ಟ್ರೈಲರ್

ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಘೋಸ್ಟ್ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಇಂದು ಟಿ ಸಿರೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

ಎಂ ಜಿ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಸಂದೇಶ್ ನಾಗರಾಜ್ ತಮ್ಮ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ಶಿವರಾಜ್ ಕುಮಾರ್ ಸೇರಿದಂತೆ ಪ್ರಕಾಶ್ ನಾರಾಯಣನ್, ಅನುಪಮ್ ಖೇರ್, ಸತ್ಯಪ್ರಕಾಶ್ ಮತ್ತು ಕೆಜಿಎಫ್ ಖ್ಯಾತಿಯ ಆರ್ಚನಾ ಜೋಯಿಸ್ ತೆರೆ ಹಂಚಿಕೊಂಡಿದ್ದಾರೆ. ಪ್ರಸನ್ನ ವಿಎಂ ಮತ್ತು ಮಾಸ್ತಿ ಡೈಲಾಗ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಇನ್ನುಳಿದಂತೆ  ಅಮೋಘ ವರ್ಷ ಹಾಗೂ ಪ್ರಸನ್ನ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://www.youtube.com/watch?v=ANmWPmErC5o

For Latest News Updates, Join Our Whatsapp Community🚩
RELATED ARTICLES

Most Popular