HomeEntertainmentಜೂನ್ 15ಕ್ಕೆ ಬಿಡುಗಡೆಯಾಗಲಿದೆ 'ಆರಾಟ' ಚಿತ್ರದ ಟ್ರೈಲರ್

ಜೂನ್ 15ಕ್ಕೆ ಬಿಡುಗಡೆಯಾಗಲಿದೆ ‘ಆರಾಟ’ ಚಿತ್ರದ ಟ್ರೈಲರ್

ಜೂನ್ 21ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಪುಷ್ಪರಾಜ್ ಮಾಲರ ಬೀಡು ನಿರ್ದೇಶನದ ಬಹು ನಿರೀಕ್ಷಿತ ಆರಾಟ ಚಿತ್ರದ ಟ್ರೈಲರ್ ಇದೆ ಜೂನ್ 15 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.

ಈ ಚಿತ್ರದಲ್ಲಿ ರಂಜನ್ ಕಾಸರಗೋಡು ನಾಯಕನಟನಾಗಿದ್ದು ಇನ್ನುಳಿದಂತೆ ವೆನ್ಯಾ ರೈ, ಜ್ಯೋತಿಶ್ ಶೆಟ್ಟಿ, ಅನಿಲ್ ರಾಜ್ ಉಪ್ಪಳ, ಸುನಿಲ್ ನೆಲ್ಲಿಗುಡ್ಡೆ , ರವಿ ರಾಮಕುಂಜ, ಸಂದೀಪ್ ಭಕ್ ಮಣಿ. , ಉತ್ಸವ್ ವಾಮಂಜೂರ್, ನಯನಾ ಸಾಲಿಯಾನ್ ತೆರೆ ಹಂಚಿಕೊಂಡಿದ್ದಾರೆ. ಪಿ ಎನ್ ಆರ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದ್ದು, ದಾಮು ಕನಸೂರ್ ಸಂಕಲನ, ರವಿ ಸುವರ್ಣ  ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ. ಶಮೀರ್ ಮುಡಿಪು ಅವರ ಸಂಗೀತ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular