HomeLatest Newsಬಾಹುಬಲಿ : ದಿ ಟಾರ್ಚ್ ಬೇರರ್' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ; 'ಬಾಹುಬಲಿ-3' ಬಗ್ಗೆ ಬಿಗ್ ಹಿಂಟ್,...

ಬಾಹುಬಲಿ : ದಿ ಟಾರ್ಚ್ ಬೇರರ್’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ; ‘ಬಾಹುಬಲಿ-3’ ಬಗ್ಗೆ ಬಿಗ್ ಹಿಂಟ್, ಫ್ಯಾನ್ಸ್ ಫುಲ್ ಖುಷ್.!

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನಿರ್ಮಿಸಿದ ‘ಬಾಹುಬಲಿ’ ಸಿನಿಮಾ ಟಾಲಿವುಡ್‌ನ ಮಟ್ಟವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಚಿತ್ರವಾಗಿದೆ. ಭಾರತೀಯ ಸಿನಿರಂಗದ ಇತಿಹಾಸ ನಿರ್ಮಿಸಿದ ‘ಬಾಹುಬಲಿ’ ಚಿತ್ರದ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ‘ಬಾಹುಬಲಿ: ದಿ ಟಾರ್ಚ್ ಬೇರರ್’ ಹೆಸರಿನ ನಾಲ್ಕು ಭಾಗಗಳ ಡಾಕ್ಯುಮೆಂಟರಿ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭವಾಗಿದ್ದು, ಇದರಲ್ಲಿನ ರಾಣಾ ದಗ್ಗುಬಾಟಿ ಹೇಳಿಕೆ ‘ಬಾಹುಬಲಿ-3’ ಬಗ್ಗೆ ಹೊಸ ನಿರೀಕ್ಷೆ ಮೂಡಿಸಿದೆ. ಆದರೆ ಚಿತ್ರದ ಮೂರನೇ ಭಾಗದ ಕುರಿತು ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

“ಬಾಹುಬಲಿಗೂ ಮೊದಲು – ಬಾಹುಬಲಿಯ ನಂತರ” ಎನ್ನುವಷ್ಟು ದೊಡ್ಡ ಪ್ರಭಾವವನ್ನು ಈ ಸಿನಿಮಾ ಬೀರಿತ್ತು. ‘ಬಾಹುಬಲಿ’ಯ ಎರಡು ಭಾಗಗಳು ಭಾರತೀಯ ಸಿನಿರಂಗಕ್ಕೆ ಹೊಸ ದಿಕ್ಕನ್ನು ತೋರಿಸಿವೆ. ಈ ಸಿನಿಮಾದ ಮೂಲಕ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕ ಶೆಟ್ಟಿ, ಎಸ್.ಎಸ್. ರಾಜಮೌಳಿ ಸೇರಿದಂತೆ ಚಿತ್ರತಂಡದ ಅನೇಕರು ಪ್ಯಾನ್ ಇಂಡಿಯಾ ಖ್ಯಾತಿ ಗಳಿಸಿದರು.

 ಈ ಹಿಂದೆ ಬಾಹುಬಲಿ: The Eternal War’ ಎಂಬ ಅನಿಮೇಷನ್ ಸರಣಿಯನ್ನು ಘೋಷಿಸಿ ಅದರ ಟೀಸರ್ ಬಿಡುಗಡೆ ಮಾಡಲಾಗಿತ್ತು. ಜೊತೆಗೆ ‘ ಬಾಹುಬಲಿ Epic’ ಹೆಸರಿನಲ್ಲಿ ಮೊದಲ ಮತ್ತು ಎರಡನೇ ಭಾಗಗಳನ್ನು ಒಂದೇ ಚಿತ್ರವಾಗಿ ಮರುಬಿಡುಗಡೆ ಮಾಡಲಾಗಿತ್ತು. ಇದೇ ವೇಳೆ ‘ಬಾಹುಬಲಿ-3’ ಬರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈಗ ‘Baahubali: The Torch Bearer’ ಎಂಬ ಡಾಕ್ಯುಮೆಂಟರಿ ಸರಣಿ ಬಿಡುಗಡೆಯಾಗಿದೆ.

ನೆಟ್‌ಫ್ಲಿಕ್ಸ್ ನಿರ್ಮಿಸಿರುವ ಈ ಸರಣಿ ಈಗ ಅದೇ ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಡಾಕ್ಯುಮೆಂಟರಿ ಒಟ್ಟು ನಾಲ್ಕು ಎಪಿಸೋಡ್‌ಗಳಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಪ್ರಭಾಸ್, ರಾಜಮೌಳಿ, ರಾಣಾ, ಅನುಷ್ಕ ಶೆಟ್ಟಿ, ರಮ್ಯಕೃಷ್ಣ, ಸೆಂಥಿಲ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಮತ್ತು ತಾಂತ್ರಿಕ ತಜ್ಞರು ‘ಬಾಹುಬಲಿ’ ಚಿತ್ರದ ನಿರ್ಮಾಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಮೇಕಿಂಗ್ ದೃಶ್ಯಗಳನ್ನೂ ಒಳಗೊಂಡಿದ್ದು, ಈ ಸರಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಾಕ್ಯುಮೆಂಟರಿಯೊಂದರಲ್ಲಿ ಮಾತನಾಡಿರುವ ರಾಣಾ ದಗ್ಗುಬಾಟಿ, “ಈ ಘೋಷಣೆಗೆ ಜಗತ್ತು ಇನ್ನೂ ಸಿದ್ಧವಾಗಿಲ್ಲ. ಆದರೆ ನಿಮ್ಮೆಲ್ಲರಿಗಾಗಿ ‘ಬಾಹುಬಲಿ-3’ ಬರಲಿದೆ” ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆದರೆ ಚಿತ್ರತಂಡದಿಂದ ‘ಬಾಹುಬಲಿ-3’ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ರಾಣಾ ಹೇಳಿರುವ ಮಾತು ಚಿತ್ರದ ಅಧಿಕೃತ ಪ್ರಕಟಣೆಯೇ ಅಥವಾ ಪ್ರಚಾರದ ಭಾಗವೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular