HomeEntertainmentಇಂದು ಬಿಡುಗಡೆಯಾಗಲಿದೆ 'ಹಗ್ಗ' ಚಿತ್ರದ ಟೀಸರ್

ಇಂದು ಬಿಡುಗಡೆಯಾಗಲಿದೆ ‘ಹಗ್ಗ’ ಚಿತ್ರದ ಟೀಸರ್

ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅವಿನಾಶ್ ಎನ್ ನಿರ್ದೇಶನದ ಬಹು ನಿರೀಕ್ಷಿತ  ‘ಹಗ್ಗ’ ಚಿತ್ರದ ಟೀಸರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಸಂತ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಡಿ ರಾಜ್ ಭಾರದ್ವಾಜ್ ನಿರ್ಮಾಣ ಮಾಡಿದ್ದು, ಅನುಪ್ರಭಾಕರ್ ಸೇರಿದಂತೆ  ವೇಣು, ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾಬೆಳವಾಡಿ, ಪ್ರಿಯಾ ಹೆಗಡೆ, ಮೈಚೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ. ತಾರಾ ಬಳಗದಲ್ಲಿದ್ದಾರೆ. ಎನ್ ಎಂ ವಿಶ್ವ ಸಂಕಲನ, ಸಿನಿಟೆಕ್ ಸೂರಿ ಛಾಯಾಗ್ರಹಣ, ಹಾಗೂ ಮನೋಹರ್ ಎಸ್ಪಿ ಅವರ ಸಂಭಾಷಣೆ ಇದೆ. ಇನ್ನುಳಿದಂತೆ ಮ್ಯಾಥ್ಯೂಸ್ ಮನು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular