HomeAstroವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳುತ್ತದೆ ನಮ್ಮ ಪಾದಗಳ ಆಕಾರ..…!

ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳುತ್ತದೆ ನಮ್ಮ ಪಾದಗಳ ಆಕಾರ..…!

ರಾಶಿಚಕ್ರ ಚಿಹ್ನೆ, ಜನ್ಮದಿನಾಂಕ, ಕೈಯಲ್ಲಿರುವ ರೇಖೆಗಳ ಮೂಲಕ  ಭವಿಷ್ಯವನ್ನು ತಿಳಿದುಕೊಳ್ಳಲು ಜ್ಯೋತಿಷ್ಯದಲ್ಲಿ ಹಲವು ಮಾರ್ಗಗಳಿವೆ. ಅದೇ ರೀತಿ ವ್ಯಕ್ತಿಯ ಭವಿಷ್ಯ, ವೃತ್ತಿ, ಆರ್ಥಿಕ ಸ್ಥಿತಿ, ಸ್ವಭಾವ ಇತ್ಯಾದಿಗಳನ್ನು ಸಹ ಪಾದಗಳೇ ಹೇಳುತ್ತವೆ. ಪಾದಗಳ ಆಕಾರ, ವಿನ್ಯಾಸ, ಬಣ್ಣ, ಕಾಲ್ಬೆರಳುಗಳು ಮತ್ತು ಅಡಿಭಾಗದಲ್ಲಿರುವ ಗುರುತುಗಳಿಂದ ಇವನ್ನೆಲ್ಲ ತಿಳಿಯಬಹುದು. ಅಂತಹ ಕೆಲವು ಚಿಹ್ನೆಗಳು ಅಥವಾ ವಿಧಾನಗಳನ್ನು ಸಾಮುದ್ರ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಪಾದಗಳೇ ಹೇಳುತ್ತವೆ ವ್ಯಕ್ತಿತ್ವ ಮತ್ತು ಭವಿಷ್ಯ!

ಕಾಲ್ಬೆರಳುಗಳು: ಕಾಲ್ಬೆರಳುಗಳು ದಪ್ಪವಾಗಿದ್ದರೆ ವ್ಯಕ್ತಿಯು ತನ್ನ ಪ್ರೀತಿಪಾತ್ರರಿಗಾಗಿ ಜೀವನವನ್ನೇ ತ್ಯಾಗ ಮಾಡಲು ಸಿದ್ಧನಿದ್ದಾನೆ ಎಂದರ್ಥ. ಯಾವಾಗಲೂ ತನ್ನ ಕುಟುಂಬ, ಸ್ನೇಹಿತರ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ಅವರನ್ನು ಸಂತೋಷವಾಗಿರಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತಾನೆ. ಕಾಲ್ಬೆರಳುಗಳು ತೆಳ್ಳಗಿದ್ದರೆ ಅಂಥವರು ತಮ್ಮ ಇಚ್ಛೆಯಂತೆ ಬದುಕುತ್ತಾರೆ, ಸ್ವಂತಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇತರರಿಗೆ ಕೊಡಲು ಮುಂದಾಗುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ದನೆಯ ಕಾಲ್ಬೆರಳು: ಕಾಲ್ಬೆರಳು ಪಕ್ಕದ ಬೆರಳಿಗೆ ಸಮನಾಗಿದ್ದರೆ ಅಂತಹ ಜನರು ಪ್ರಾಬಲ್ಯವನ್ನು ಹೊಂದಿರುತ್ತಾರೆ. ಅವರು ತಮ್ಮ ದೃಷ್ಟಿಕೋನವನ್ನು ಇತರರು ಒಪ್ಪಿಕೊಳ್ಳುವಂತೆ ಮಾಡಬಲ್ಲರು.

ಪಾದದ ಬಣ್ಣ: ಪಾದದ ತಳವು ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿದ್ದರೆ ಅದು ತುಂಬಾ ಮಂಗಳಕರ. ಅಂತಹ ವ್ಯಕ್ತಿಯು ರಾಜನಂತೆ ಜೀವನ ನಡೆಸುತ್ತಾನೆ. ಅಪಾರ ಸಂಪತ್ತಿನ ಜೊತೆಗೆ ಸ್ಥಾನಮಾನ, ಪ್ರತಿಷ್ಠೆಯೂ ಸಿಗುತ್ತದೆ. ಒರಟು ಚರ್ಮದೊಂದಿಗೆ ಒಣ ಮತ್ತು ಹಳದಿ ಅಡಿಭಾಗದ ಪಾದಗಳಿದ್ದರೆ ಅಂಥವರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಾರೆ. ಅವರ ಜೀವನ ಹೋರಾಟ ಮತ್ತು ತೊಂದರೆಗಳಲ್ಲಿ ಕಳೆಯುತ್ತದೆ. ಅಷ್ಟೇ ಅಲ್ಲ ಒಡೆದ ಹಿಮ್ಮಡಿಗಳು ಕೂಡ ಅಶುಭದ ಸಂಕೇತ.

ಕಾಲ್ಬೆರಳುಗಳ ನಡುವಿನ ಅಂತರ: ಕಾಲ್ಬೆರಳುಗಳ ನಡುವಿನ ಅಂತರ ಬಹಳಷ್ಟು ವಿಷಯಗಳನ್ನು ಬಿಚ್ಚಿಡುತ್ತದೆ. ಕಾಲ್ಬೆರಳುಗಳ ನಡುವೆ ಅಂತರ ಹೆಚ್ಚಾಗಿದ್ದರೆ ಅಂತಹ ಜನರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ. ಇವರಲ್ಲಿ ಆಡಂಬರ ಹೆಚ್ಚು, ಸೂಕ್ಷ್ಮತೆಯ ಕೊರತೆಯಿರುತ್ತದೆ. ಬೆರಳುಗಳು ಪರಸ್ಪರ ಅಂಟಿಕೊಂಡಂತಿದ್ದರೆ ಅಂಥವರು ತುಂಬಾ ಪ್ರಾಮಾಣಿಕ ಮತ್ತು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular