HomeBusinessಗ್ರಾಹಕರಿಗೆ ಶಾಕಿಂಗ್ ನ್ಯೂಸ್: ದಾಖಲೆಯ ಮಟ್ಟಕ್ಕೆ ಚಿನ್ನ, ಬೆಳ್ಳಿ ದರ

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ದಾಖಲೆಯ ಮಟ್ಟಕ್ಕೆ ಚಿನ್ನ, ಬೆಳ್ಳಿ ದರ

ನವದೆಹಲಿ: ಹಬ್ಬದ ಸೀಸನ್ ನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರುಗತಿಯಲ್ಲಿ ಮುಂದುವರೆದಿದೆ. ಇದೇ ರೀತಿ ದರ ಏರಿಕೆ ಮುಂದುವರೆಯದಲ್ಲಿ ಆಭರಣ ಚಿನ್ನ ದರ 10 ಗ್ರಾಂಗೆ 77,000 ರೂ. ದಾಟಲಿದ್ದು, ಬೆಳ್ಳಿ ದರ ಕೆಜಿಗೆ ಒಂದು ಲಕ್ಷ ರೂಪಾಯಿ ದಾಟಲಿದೆ ಎಂದು ಆಭರಣ ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಸಾಮಾನ್ಯವಾಗಿ ವಾರ್ಷಿಕ ಶೇಕಡ 10ರಷ್ಟು ಏರಿಕೆ ಕಾಣುತ್ತಿದ್ದ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಈ ಬಾರಿ ಅತ್ಯಧಿಕ ಶೇಕಡ 40ರಷ್ಟು ಏರಿಕೆಯಾಗಿದೆ. ಯುದ್ಧ ಸೇರಿ ಅನೇಕ ಜಾಗತಿಕ ರಾಜಕೀಯ, ಭೌಗೋಳಿಕ ಪರಿಸ್ಥಿತಿಗಳು ದರ ಏರಿಕೆಗೆ ಕಾರಣವಾಗಿವೆ. ಅಮೆರಿಕದ ಫೆಡರಲ್ ರಿಸರ್ವ್ ಇತ್ತೀಚೆಗೆ ಬಡ್ಡಿ ದರ ಇಳಿಕೆ ಮಾಡಿರುವುದು ಮತ್ತು ಇನ್ನಷ್ಟು ಇಳಿಕೆ ನಿರೀಕ್ಷೆ ಇರುವುದರಿಂದ ಚಿನ್ನದ ದರ ಏರುಗತಿಯಲ್ಲಿ ಮುಂದುವರೆದಿದೆ.

ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್ ಚಿನ್ನದ ದರ 10 ಗ್ರಾಂ ಗೆ 72,220 ರೂಪಾಯಿ, 24 ಕ್ಯಾರಟ್ ಚಿನ್ನದ ದರ 10 ಗ್ರಾಂ ಗೆ 78,050 ರೂಪಾಯಿಗೆ ಮಾರಾಟವಾಗಿದೆ. ಬೆಳ್ಳಿ ದರ ಒಂದು ಕೆಜಿಗೆ 93,100 ರೂಪಾಯಿಗೆ ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಕೆ ಮಾಡಿದ ನಂತರ ಖರೀದಿ ಭರಾಟೆ ಜೋರಾಗಿದೆ. ಈ ಬಾರಿ ಉತ್ತಮ ಮುಂಗಾರು ಕಾರಣ ಹಬ್ಬದ ಸೀಸನ್ ನಲ್ಲಿ ಆಭರಣ ಖರೀದಿ ಹೆಚ್ಚಾಗಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ಚಿನ್ನ ಬೆಳ್ಳಿ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular