HomeEntertainmentರಾಜ್ಯಾದ್ಯಂತ ರಿಲೀಸ್ ಆಯ್ತು ಪ್ರವೀಣ್ ತೇಜ್ ನಟನೆಯ 'ಜಿಗರ್'

ರಾಜ್ಯಾದ್ಯಂತ ರಿಲೀಸ್ ಆಯ್ತು ಪ್ರವೀಣ್ ತೇಜ್ ನಟನೆಯ ‘ಜಿಗರ್’

ಸೂರಿ ಕುಂದಾರ್ ನಿರ್ದೇಶನದ ಪ್ರವೀಣ್ ತೇಜ್ ಅಭಿನಯದ ‘ಜಿಗರ್’ ಸಿನಿಮಾ ಇಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಲವ್ವರ್ ಬಾಯ್ ಆಗಿ ಅಭಿನಯಿಸುತ್ತಿದ್ದ, ಪ್ರವೀಣ್ ತೇಜ್ ಮೊಟ್ಟ ಮೊದಲ ಬಾರಿಗೆ  ಮಾಸ್ ಅವತಾರದಲ್ಲಿ  ಕಾಣಿಸಿಕೊಂಡಿದ್ದಾರೆ.

ಆ್ಯಕ್ಷನ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಚಿತ್ರವನ್ನು ಯುಕೆ ಪ್ರೊಡಕ್ಷನ್ ಬ್ಯಾನರ್ ನಡಿ ಪೂಜಾ ವಸಂತ್ ಕುಮಾರ್ ನಿರ್ಮಾಣ ಮಾಡಿದ್ದು, ಪ್ರವೀಣ್ ತೇಜ್ ಅವರಿಗೆ ಜೋಡಿಯಾಗಿ ವಿಜಯಶ್ರೀ ಕಲ್ಬುರ್ಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಯಶ್ ಶೆಟ್ಟಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ,  ಶಿವ ಸೇನಾ ಅವರ  ಛಾಯಾಗ್ರಹಣವಿದ್ದು, ರಿತ್ವಿಕ್ ಮುರುಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular