ಟಾಯ್ಲೆಟ್ ಸೀಟ್‌ಗಿಂತಲೂ ಕೊಳಕಾಗಿರುತ್ತೆ ನಾವು ಬಳಸುವ ದಿಂಬಿನ ಕವರ್; ಸಂಶೋಧನೆಯಲ್ಲಿ ಬಹಿರಂಗವಾಗಿದೆ ಶಾಕಿಂಗ್‌ ಸಂಗತಿ….!

ಸುಖಕರವಾದ ನಿದ್ರೆಗೆ ದಿಂಬುಗಳನ್ನು ಎಲ್ಲರೂ ಬಳಸುತ್ತೇವೆ. ಕೆಲವರಿಗಂತೂ ದಿಂಬಿಲ್ಲದೆ ಮಲಗುವುದೇ ಅಸಾಧ್ಯ. ದಿಂಬುಗಳ ಬಳಕೆ ಸಂಪೂರ್ಣವಾಗಿ ಸುರಕ್ಷಿತ. ಆದರೆ ದಿಂಬಿನ ಹೊದಿಕೆಯನ್ನು ನಿಯಮಿತವಾಗಿ ಬದಲಾಯಿಸದಿದ್ದರೆ ಕಾಯಿಲೆಗಳು ನಿಮ್ಮನ್ನು ಆವರಿಸಿಕೊಳ್ಳಬಹುದು.  ಹೊಸ ಸಂಶೋಧನೆಯೊಂದರ ಪ್ರಕಾರ ಟಾಯ್ಲೆಟ್ ಸೀಟ್‌ಗಿಂತ 17 ಸಾವಿರ ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ದಿಂಬಿನ ಕವರ್‌ನಲ್ಲಿರುತ್ತವೆ. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಇದನ್ನು ಬಹಿರಂಗಪಡಿಸಿದ್ದಾರೆ.

ಬೆವರು, ಮಲ ಮತ್ತು ಲಾಲಾರಸದಿಂದಾಗಿ ಸತ್ತ ಚರ್ಮದ ಕೋಶಗಳು ಸೂಕ್ಷ್ಮಜೀವಿಗಳಿಂದ ತುಂಬಿರುತ್ತವೆ. ಸ್ವ್ಯಾಬ್ ಪರೀಕ್ಷೆಯಿಂದ ಈ ಅಂಶ ಬಯಲಾಗಿದೆ. ಅಧ್ಯಯನದ ಸಮಯದಲ್ಲಿ ತೊಳೆಯದ ದಿಂಬಿನ ಕವರ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವುಗಳಲ್ಲಿ ಚರ್ಮದ ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಅಧ್ಯಯನಗಳ ಪ್ರಕಾರ ಸರಾಸರಿ ಪ್ರತಿ 24 ದಿನಗಳಿಗೊಮ್ಮೆ ಎಲ್ಲರೂ ದಿಂಬಿನ ಕವರ್ ಅನ್ನು ಬದಲಾಯಿಸುತ್ತಾರೆ ಅಥವಾ ಸ್ವಚ್ಛಗೊಳಿಸುತ್ತಾರೆ. ನಾವು ದಿಂಬಿನ ಮೇಲೆ ತಲೆಯಿಟ್ಟು ಮಲಗಿದಾಗ ಚರ್ಮದ ಸತ್ತ ಜೀವಕೋಶಗಳು, ಬೆವರು ಅಥವಾ ಧೂಳಿನ ಕಣಗಳು ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ಒದಗಿಸುತ್ತವೆ. ಅವುಗಳನ್ನು ಹಾಸಿಗೆಯತ್ತ ಆಕರ್ಷಿಸುತ್ತವೆ.

ದಿಂಬಿನ ಹೊದಿಕೆಯು ರೇಷ್ಮೆಯದಾಗಿದ್ದರೆ ಬ್ಯಾಕ್ಟೀರಿಯಾ ಬರುವ ಸಾಧ್ಯತೆಗಳು ಕಡಿಮೆ ಮತ್ತು ಇದು ಮೊಡವೆಗಳಿಗೆ ಕಾರಣವಾಗುವುದಿಲ್ಲ ಎನ್ನುತ್ತಾರೆ ತಜ್ಞರು. ತ್ವಚೆಯ ಆರೋಗ್ಯಕ್ಕೆ ಹತ್ತಿಯ ಹೊದಿಕೆಗಿಂತ ದಿಂಬಿಗೆ ಉತ್ತಮ ರೇಷ್ಮೆಯ ಕವರ್‌ ಹಾಕುವುದು ಬೆಸ್ಟ್‌. ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ ಹೊದಿಕೆ, ದಿಂಬಿನ ಕವರ್‌, ಬೆಡ್‌ಸ್ಪ್ರೆಡ್‌ ಇವನ್ನೆಲ್ಲ  ನಿಯಮಿತವಾಗಿ ಬದಲಾಯಿಸಬೇಕು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read