HomeLatest Newsನಾಳೆ ಬಹುನಿರೀಕ್ಷಿತ '45' ಟ್ರೈಲರ್ ಬಿಡುಗಡೆ: ಡಿ. 25ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ

ನಾಳೆ ಬಹುನಿರೀಕ್ಷಿತ ’45’ ಟ್ರೈಲರ್ ಬಿಡುಗಡೆ: ಡಿ. 25ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ‘45’ ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದೆ.

ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. ಶಿವರಾಜ್‌ ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಕೌಸ್ತುಭ ಮಣಿ ಮತ್ತು ಜಿಶು ಸೇನ್‌ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಸಂಗೀತ ಸಂಯೋಜಿಸಿದ್ದಾರೆ.

ಈ ಚಿತ್ರವು ಡಿಸೆಂಬರ್ 25ರಂದು ಕ್ರಿಸ್‌ ಮಸ್‌ ಗೆ ಬಿಡುಗಡೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸತ್ಯ ಹೆಗ್ಡೆ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಮತ್ತು ಮೋಹನ್ ಪಂಡಿತ್ ಕಲಾ ನಿರ್ದೇಶನ ಮಾಡಿದ್ದಾರೆ. ಡಾ. ಕೆ. ರವಿವರ್ಮ, ಜಾಲಿ ಬಾಸ್ಟಿಯನ್, ಡಿಫರೆಂಟ್ ಡ್ಯಾನಿ ಮತ್ತು ಚೇತನ್ ಡಿಸೋಜಾ ಸಾಹಸ ಸಂಯೋಜನೆ ಮಾಡಿದ್ದಾರೆ, ಚಿನ್ನಿ ಪ್ರಕಾಶ್ ಮತ್ತು ಬಿ. ಧನಂಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ಚಿತ್ರದ 40% ಕ್ಕಿಂತ ಹೆಚ್ಚು VFX ಅವಲಂಬಿಸಿದೆ, ಇದನ್ನು ಹಾಲಿವುಡ್ ದರ್ಜೆಯ ದೃಶ್ಯ ಪರಿಣಾಮಗಳಿಗೆ ಹೆಸರುವಾಸಿಯಾದ ಕೆನಡಾದ ಕಂಪನಿಯಾದ MARZ ಸ್ಟುಡಿಯೋ(ಮಾನ್ಸ್ಟರ್ಸ್ ಏಲಿಯನ್ಸ್ ರೋಬೋಟ್ಸ್ ಜೋಂಬಿಸ್) ನಿರ್ವಹಿಸಿದೆ.

ಡಿಸೆಂಬರ್ 15 ರಂದು ಸಂಜೆ 6:45 ಕ್ಕೆ ಬೆಂಗಳೂರು ಶ್ರೀನಿವಾಸನಗರದ ಶಂಕರ್ ನಾಗ್ ಸರ್ಕಲ್ ನ ಕೆಂಪೇಗೌಡ ಮೈದಾನದಲ್ಲಿ ಹಾಗೂ ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಉಡುಪಿ, ತುಮಕೂರಿನಲ್ಲಿ ’45’ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular