HomeKarnatakaBIG NEWS : ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು : ಭುಗಿಲೆದ್ದ ಭಕ್ತರ ಆಕ್ರೋಶ

BIG NEWS : ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು : ಭುಗಿಲೆದ್ದ ಭಕ್ತರ ಆಕ್ರೋಶ

ಬೆಳ್ತಂಗಡಿ : ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟ ಘಟನೆ ಬಜಿರೆ ಗ್ರಾಮದ ಬಾಡಾರು ಕೊರಂಗಲ್ಲುವಿನಲ್ಲಿ ನಡೆದಿದ್ದು, ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ –ಬಂಟ್ವಾಳ ತಾಲೂಕು ಗಡಿ ಭಾಗದಲ್ಲಿರುವ ಬಾಡಾರು ಎಂಬಲ್ಲಿ ಇರುವ ಕೊರಗಜ್ಜನ ಗುಡಿಯಲ್ಲಿ ಸಾರ್ವಜನಿಕವಾಗಿ ನೇಮೋತ್ಸನ ನಡೆಯುತ್ತಿತ್ತು. ಆದರೆ ಗುಡಿಯ ಜಾಗದ ವಿಚಾರ ಸೇರಿ ಹಲವು ವಿಚಾರಕ್ಕೆ ಆಗಾರ ಜಗಳ, ಕಿರಿಕ್ ಗಳು ನಡೆಯುತ್ತಿತ್ತು ಎನ್ನಲಾಗಿದೆ.

ಆದರೆ ಕಿಡಿಗೇಡಿಗಳು ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟಿದ್ದು, ಭಕ್ತರ ಆಕ್ರೋಶ ಭುಗಿಲೆದ್ದಿದೆ. ಕೊರಗಜ್ಜನ ಗುಡಿಗೆ ಬೆಂಕಿಯಟ್ಟ ಆರೋಪಿಗಳನ್ನು ಬಂಧಿಸುವಂತೆ ಭಕ್ತರು ಆಗ್ರಹಿಸಿದ್ದಾರೆ. ಘಟನೆ ಹಿನ್ನೆಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸ್ ತನಿಖೆಯಿಂದಷ್ಟೇ ಘಟನೆಗೆ ನಿಖರ ಕಾರಣ ತಿಳಿದು ಬರಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular