HomeRecipiesಇಲ್ಲಿದೆ ರುಚಿ ರುಚಿ ‘ಗಸಗಸೆ ಹಲ್ವʼ ತಯಾರಿಸುವ ವಿಧಾನ

ಇಲ್ಲಿದೆ ರುಚಿ ರುಚಿ ‘ಗಸಗಸೆ ಹಲ್ವʼ ತಯಾರಿಸುವ ವಿಧಾನ

ಹಲ್ವಾ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಗಸೆ ಗಸೆ ಬಳಸಿ ಮಾಡುವ ಹಲ್ವಾ ಇಲ್ಲಿದೆ. ಥಟ್ಟಂತ ತಯಾರಿಸಬಹುದಾದ. ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಸಗಸೆ – 1ಕಪ್, ಹಾಲು – 2 ಕಪ್, ಸಕ್ಕರೆ – 1 ಕಪ್, ತುಪ್ಪ – 3 ಟೀ ಸ್ಪೂನ್, ಬಾದಾಮಿ, ಗೋಡಂಬಿ – ಸ್ವಲ್ಪ.

ಮಾಡುವ ವಿಧಾನ:

ಮೊದಲಿಗೆ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಬಾದಾಮಿ, ಗೋಡಂಬಿ ಹುರಿದುಕೊಳ್ಳಿ, ನಂತರ ಬ್ಲೆಂಡರ್ ಗೆ ಗಸಗಸೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.

 ನಂತರ ಇದಕ್ಕೆ 1 ಕಪ್ ಹಾಲು ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಇದನ್ನು ಗೋಡಂಬಿ, ಬಾದಾಮಿ ಹುರಿದ ಪ್ಯಾನ್ ಗೆ ಸೇರಿಸಿ ಸಕ್ಕರೆ ಹಾಕಿ ಹದ ಉರಿಯಲ್ಲಿ ಮಿಕ್ಸ್ ಮಾಡಿ. ಇದು ತಳ ಬಿಡುತ್ತಿದ್ದಂತೆ ಇದಕ್ಕೆ ಗೋಡಂಬಿ, ಬಾದಾಮಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿದರೆ ರುಚಿಯಾದ ಗಸಗಸೆ ಹಲ್ವಾ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular