HomeEntertainment'ಡಾಲರ್ಸ್ ಪೇಟೆ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಡಾಲರ್ಸ್ ಪೇಟೆ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮೋಹನ್ ಎನ್ ಮುನಿ ನಾರಾಯಣಪ್ಪ ನಿರ್ದೇಶನದ ‘ಡಾಲರ್ಸ್ ಪೇಟೆ’ ಚಿತ್ರದ ‘ಬೇಬಿ ಪೈಸಾ ಲೂಟು ಹೈ’ ಎಂಬ ಲಿರಿಕಲ್ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಉಷಾ ಉತ್ತಪ್ ಹಾಗೂ ಸೂರಜ್ ಜೋಯಿಸ್ ಈ ಹಾಡಿಗೆ ಧ್ವನಿಯಾಗಿದ್ದು, ಸಂಜಯ್ ಮಳವಳ್ಳಿ ಸಾಹಿತ್ಯವಿದೆ.

ಈ ಚಿತ್ರವನ್ನು ಪೆಂಟ್ರಿಕ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ನಲ್ಲಿ ಪೂಜಾ ಟಿ ವೈ ನಿರ್ಮಾಣ ಮಾಡಿದ್ದು, ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮಹೇಶ್ ತೊಗಟ  ಸಂಕಲನ, ಆನಂದ್ ಸುಂದರೇಶ ಛಾಯಾಗ್ರಹಣ, ಹಾಗೂ ಅರ್ಜುನ್ ರಾಜ್ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ. ಸೌಮ್ಯ ಜಗನ್ಮೂರ್ತಿ ಪೃಥ್ವಿ ಅಂಬಾರ್, ವೆಂಕಟ್ ರಾಜ್, ಆಕರ್ಷ್ ಕಮಲ, ಕುಶಾಲ್ಸ್, ಕೌಶಿಕ್ ಗೌಡ, ಮಹೇಂದ್ರ ಪ್ರಸಾದ್, ರಘು ರಾಮನಕೊಪ್ಪ, ಹೊನ್ನವಳ್ಳಿ ಕೃಷ್ಣ, ಹುಲಿ ಕಾರ್ತಿಕ್, ದತ್ತು ಬಣಕಾರ್, ಜಿನಿತ್, ಪ್ರತಿಮಾ ಟಿ, ಲೋಕೇಶ್ ಪ್ರಕಾಶ್, ಲೋಕೇಶ್ ಸುಕುಮಾರ್, ವಿಶ್ವ ವಿಖ್ಯಾತ್, ಬಸು ಹಿರೇಮಟ್, ಜೋತೀಶ್ ಶೆಟ್ಟಿ, ತೇಜೇಶ್ ಬಿ.ಕೆ, ಸುನಿಲ್, ಮಂಜುನಾಥ್ ಅಣ್ಣಯ್ಯಪ್ಪ, ಪೃಥ್ವಿ, ಪರಶಿವ ಮೂರ್ತಿ, ಪ್ರದೀಪ್ ಚಂದರ್, ಚಕ್ರವರ್ತಿ ಸೇರಿದಂತೆ ದೊಡ್ಡ ಕಲಾವಿದರ ದಂಡೆ ಈ ಸಿನಿಮಾದಲ್ಲಿದೆ.

For Latest News Updates, Join Our Whatsapp Community🚩
RELATED ARTICLES

Most Popular