ತನ್ನ ಮೋಷನ್ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ಇದು ಎಂಥಾ ಲೋಕವಯ್ಯ’ ಚಿತ್ರದ ಲಿರಿಕಲ್ ಹಾಡು, ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ‘ಆಗಮನ ನಿನ್ನ ಆಗಮನ’ ಎಂಬ ಹಾಡು ಇದಾಗಿದ್ದು, ಬೆಳಿಗ್ಗೆ 11 ಗಂಟೆಗೆ ರಿಲೀಸ್ ಆಗಲಿದೆ.
ಸಿತೇಶ್ ಸಿ ಗೋವಿಂದ್ ನಿರ್ದೇಶನದ ಈ ಚಿತ್ರದಲ್ಲಿ ಅನುರಾಜ್ ಕಕ್ಯಪಡವು ಸೇರಿದಂತೆ ಮೈತ್ರಿ, ಮೈಮ್ ರಾಮದಾಸ್, ವಿಶ್ವನಾಥ್ ಅಸೈಗೋಳಿ, ಗೋಪಿನಾಥ್ ಸಿಟ್ಭೇಸ್, ಗೋವಿಂದ್, ದೀಪಕ್ ರೈ ಪಾಣಾಜೆ, ಎಂ.ನರೇಶ ಶೆಣೈ, ಶಶಿರಾಜ್ ಕಾವೂರು, ಚಂದ್ರಹಾಸ್ ಉಳ್ಳಾಲ್, ಪ್ರಕಾಶ್ ತೂಮಿನಾಡ್, ಸುಕನ್ಯಾ ವೈ.ಬಿ, ಹರೀಶ್ ಬಂಗೇರ ಬಣ್ಣ ಹಚ್ಚಿದ್ದಾರೆ. ರಿತ್ವಿಕ್ ಎಸ್. ಚಂದ್, ಹಾಗೂ ಶಿಯಾದ್ ಕಬೀರ್ ಸಂಗೀತ ಸಂಯೋಜನೆ ನೀಡಿದ್ದು, ಕಡ್ಲೆಕಾಯಿ ಫಿಲಂಸ್ ಬ್ಯಾನರ್ ನಲ್ಲಿ ಎಂ ನರೇಶ ಶೆಣೈ ನಿರ್ಮಾಣ ಮಾಡಿದ್ದಾರೆ.
https://twitter.com/A2MusicSouth/status/1811649888012087613