HomeCrimeShocking: ಚಿಕ್ಕಮ್ಮನ ಜೊತೆ ಪತಿಯ ರಾಸಲೀಲೆ; ವಿರೋಧಿಸಿದ ಪತ್ನಿಗೆ ಆಸಿಡ್ ಕುಡಿಸಿ ಹತ್ಯೆ

Shocking: ಚಿಕ್ಕಮ್ಮನ ಜೊತೆ ಪತಿಯ ರಾಸಲೀಲೆ; ವಿರೋಧಿಸಿದ ಪತ್ನಿಗೆ ಆಸಿಡ್ ಕುಡಿಸಿ ಹತ್ಯೆ

ಬಿಹಾರದ ಭಾಗಲ್ಪುರದಲ್ಲಿ ವಿವಾಹಿತ ಮಹಿಳೆಯೊಬ್ಬಳ ಹತ್ಯೆ ಪ್ರಕರಣ ಸಂಚಲನ ಮೂಡಿಸಿದೆ. ಮೃತಳ ಪತಿ, ಚಿಕ್ಕಮ್ಮನ ಜೊತೆ ಸೇರಿ ಕೊಲೆ ಮಾಡಿದ್ದಾನೆ. ವಿವಾಹಿತ ಮಹಿಳೆಯನ್ನು ಕೊಲೆ ಮಾಡಿದ ರೀತಿ ಭಯಾನಕವಾಗಿದೆ. ಮೊದಲು ಪತ್ನಿಗೆ ಆಸಿಡ್ ಕುಡಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ ಪತಿ, ಶವವನ್ನು ಕೋಸಿ ನದಿಗೆ ಎಸೆದಿದ್ದಾನೆ. ಆರೋಪಿ ಪತಿ ಹಾಗೂ ಆತನ ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

ಫಯಾಜ್ 2 ವರ್ಷಗಳ ಹಿಂದೆ ಶಬ್ನಮ್ ಖಾತೂನ್ ಎಂಬಾಕೆಯನ್ನು ಮದುವೆಯಾಗಿದ್ದ. ಕೆಲ ದಿನಗಳ ಹಿಂದೆ, ಶಬ್ನಮ್ ಗೆ ತನ್ನ ಪತಿ ಫಯಾಜ್, ಚಿಕ್ಕಮ್ಮ ರೀನಾ ಖಾತೂನ್ ಜೊತೆ ಅಕ್ರಮ ಸಂಬಂಧ  ಹೊಂದಿದ್ದಾನೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಆಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಪ್ರೀತಿಗೆ ಅಡ್ಡಿಯಾದ ಪತ್ನಿಯನ್ನು ಹತ್ಯೆ ಮಾಡಲು ಇಬ್ಬರು ಮುಂದಾಗಿದ್ದಾರೆ.

ಶಬ್ನಮ್ ಕುಟುಂಬದಕ್ಕೆ ಮಗಳ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಆರೋಪಿ ಫಯಾಜ್ ಮತ್ತು  ಚಿಕ್ಕಮ್ಮ ರೀನಾಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಫಯಾಜ್ ಮತ್ತು ರೀನಾ ತಮ್ಮ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular