HomeInternationalಋತುಬಂಧದ ಪ್ರತಿಕೂಲ ಲಕ್ಷಣಗಳಿಗೆ ಕಡಿವಾಣ ಹಾಕಲು ಟೆಸ್ಟೋಸ್ಟೆರೋನ್ ಪ್ಯಾಚ್ ಅಭಿವೃದ್ದಿ

ಋತುಬಂಧದ ಪ್ರತಿಕೂಲ ಲಕ್ಷಣಗಳಿಗೆ ಕಡಿವಾಣ ಹಾಕಲು ಟೆಸ್ಟೋಸ್ಟೆರೋನ್ ಪ್ಯಾಚ್ ಅಭಿವೃದ್ದಿ

ಅನೇಕರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಋತುಬಂಧವೂ ಕಾರಣವಾಗಿರುತ್ತದೆ. ಇದೀಗ ಬ್ರಿಟನ್‌ನ ವಿವಿಯೊಂದು ಈ ಸಮಸ್ಯೆಯನ್ನು ಪರಿಹರಿಸಲು, ಟೆಸ್ಟೋಸ್ಟೆರೋನ್‌ಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟೆರೋನ್‌ನ ಮಟ್ಟವು ಋತುಬಂಧದ ವೇಳೆ ತಗ್ಗುತ್ತದೆ. ಈ ಟೆಸ್ಟೋಸ್ಟೆರೋನ್‌ಗಳು ಸ್ನಾಯುಗಳು, ಮೂಳೆ, ಗ್ರಹಿಕಾ ಶಕ್ತಿ ಹಾಗೂ ಲೈಂಗಿಕಾಸಕ್ತಿಗಳ ಆರೋಗ್ಯವನ್ನು ನಿರ್ಧರಿಸುತ್ತವೆ. ಋತುಬಂಧದ ಸಾಮಾನ್ಯ ಲಕ್ಷಣಗಳನ್ನು ಎದುರಿಸಲು ಅನೇಕ ಮಹಿಳೆಯರು ಹಾರ್ಮೋನ್ ಬದಲಾವಣೆ ಚಿಕಿತ್ಸೆ (ಎಚ್‌ಆರ್‌ಟಿ) ಪಡೆಯುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೆಸ್ಟೋಸ್ಟೆರೋನ್ ಜೆಲ್‌ಗಳು ಹಾಗೂ ಕ್ರೀಮ್‌ಗಳು ಬಹಳಷ್ಟು ಲಭ್ಯವಿದ್ದರೂ ಸಹ ಇವುಗಳೆಲ್ಲಾ ಸಾಮಾನ್ಯವಾಗಿ ಪುರುಷ ಕೇಂದ್ರಿತವಾಗಿರುತ್ತವೆ.

ಈ ಸಮಸ್ಯೆಗೆ ಪರಿಹಾರವಾಗಿ, ಋತುಬಂಧದ ವೇಳೆ ಧರಿಸಲು ವಿಶಿಷ್ಟವಾದ ಟೆಸ್ಟೋಸ್ಟೆರೋನ್ ಪ್ಯಾಚ್‌ ಒಂದನ್ನು ವಾರ್ವಿಕ್ ವಿವಿ ಅಭಿವೃದ್ಧಿಪಡಿಸಿದೆ. 2023ರಲ್ಲಿ ಈ ಪ್ಯಾಚ್‌ನ ಮೊದಲ ವೈದ್ಯಕೀಯ ಪ್ರಯೋಗ ನಡೆಸಲಾಗುವುದು. ಋತುಬಂಧದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಸದ್ಯದ ಮಟ್ಟಿಗೆ ಮಹಿಳೆಯರಿಗೆಂದು ವೈದ್ಯಕೀಯವಾಗಿ ಅನುಮೋದಿಸಲ್ಪಟ್ಟ ಯಾವುದೇ ಟೆಸ್ಟೋಸ್ಟೆರಾನ್ ಪ್ಯಾಚ್‌ಗಳು ಲಭ್ಯವಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular