HomeEntertainmentನಾಳೆ ಬಿಡುಗಡೆಯಾಗಲಿದೆ 'ರಂಗ ನಾಯಕ' ಚಿತ್ರದ ಮೊದಲ ಹಾಡು

ನಾಳೆ ಬಿಡುಗಡೆಯಾಗಲಿದೆ ‘ರಂಗ ನಾಯಕ’ ಚಿತ್ರದ ಮೊದಲ ಹಾಡು

ನವರಸ ನಾಯಕ ಜಗ್ಗೇಶ್ ಅಭಿನಯದ ಗುರುಪ್ರಸಾದ್ ನಿರ್ದೇಶನದ ‘ರಂಗ ನಾಯಕ’ ಸಿನಿಮಾ ಮುಂದಿನ ತಿಂಗಳು ಶಿವರಾತ್ರಿಗೆ ಬಿಡುಗಡೆಗೆ ಸಜ್ಜಾಗಿದ್ದು, ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.  ರಂಗ ನಾಯಕ ಚಿತ್ರದ ಮೊಟ್ಟ ಮೊದಲ ಹಾಡು ನಾಳೆ ಯೂಟ್ಯೂಬ್ನಲ್ಲಿ ರಿಲೀಸ್ ಆಗಲಿದೆ. ಈ  ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.

‘ಮಠʼ ಹಾಗೂ ”ಎದ್ದೇಳು ಮಂಜುನಾಥ’ ಬಳಿಕ ಮತ್ತೊಮ್ಮೆ ನವರಸ ನಾಯಕ ಜಗ್ಗೇಶ್ ಅವರಿಗೆ ಗುರುಪ್ರಸಾದ್ ಆಕ್ಷನ್ ಕಟ್ ಹೇಳಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ.

ಜಗ್ಗೇಶ್ ಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮಿ ಅಭಿನಯಿಸಿದ್ದು, ಎಆರ್ ವಿಖ್ಯಾತ್ ತಮ್ಮ ವಿಖ್ಯಾತ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಉಮೇಶ್ ಆರ್ ಬಿ ಸಂಕಲನ, ಅಶೋಕ್ ಸಾಮ್ರಾಟ್ ಛಾಯಾಗ್ರಹಣವಿದೆ.‌ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular