HomeEntertainment'ಮಿಸ್ ಯು' ಚಿತ್ರದ ಮೊದಲ ಗೀತೆ ರಿಲೀಸ್

‘ಮಿಸ್ ಯು’ ಚಿತ್ರದ ಮೊದಲ ಗೀತೆ ರಿಲೀಸ್

ದಕ್ಷಿಣ ಭಾರತದ ಖ್ಯಾತ ನಟ ಸಿದ್ದಾರ್ಥ್ ಹಾಗೂ ಸ್ಯಾಂಡಲ್ ವುಡ್ ನ ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಮಿಸ್ ಯು’ ಎಂಬ ತಮಿಳು ಚಿತ್ರದ ಮೊದಲ ಲಿರಿಕಲ್ ಹಾಡು ಟಿ ಸೀರೀಸ್ ತಮಿಳು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಎನ್ ರಾಜಶೇಖರ್ ನಿರ್ದೇಶನದ ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಕರುಣಾಕರನ್, ಬಾಲಸರವಣನ್, ಮಾರನ್,  ಬಣ್ಣ ಹಚ್ಚಿದ್ದಾರೆ. ಸೆವೆನ್ ಮೈಲ್ಸ್ ಫಾರ್ ಸೆಕೆಂಡ್ ಬ್ಯಾನರ್ ನಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ನಿರ್ಮಾಣ ಮಾಡಿದ್ದಾರೆ. ಘಿಬ್ರಾನ್ ವೈಭೋದ ಸಂಗೀತ ಸಂಯೋಜನೆ ನೀಡಿದ್ದು, ದಿನೇಶ್ ಪೊನ್ರಾಜ್ ಸಂಕಲನ, ಆರ್ ಅಶೋಕ್  ಸಂಭಾಷಣೆ, ದಿನೇಶ್ ಕಾಸಿ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular