HomeCrimeWatch Video | ಯುವತಿ ಚುಡಾಯಿಸಿದ್ದಕ್ಕೆ ಬಿತ್ತು ಗೂಸಾ; ಒಂದೇ ಏಟಿಗೆ ನೆಲಕ್ಕೆ ಬಿದ್ದ ಕಿಡಿಗೇಡಿ

Watch Video | ಯುವತಿ ಚುಡಾಯಿಸಿದ್ದಕ್ಕೆ ಬಿತ್ತು ಗೂಸಾ; ಒಂದೇ ಏಟಿಗೆ ನೆಲಕ್ಕೆ ಬಿದ್ದ ಕಿಡಿಗೇಡಿ

ವ್ಯಕ್ತಿಯೊಬ್ಬನನ್ನು ಒಂದೇ ಏಟಿನಲ್ಲಿ ಕೆಡವುದನ್ನು ಎಂದಾದರೂ ನೋಡಿದ್ದೀರಾ? ಇದೀಗ ಟ್ವಿಟರ್‌ನಲ್ಲಿ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಆ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸುರಂಗ ಮಾರ್ಗವನ್ನು ದಾಟುತ್ತಿದ್ದಾಗ ಘಟನೆ ನಡೆದಿದೆ.

ವಿಡಿಯೋದಲ್ಲಿ ಇಬ್ಬರು ಕಿಡಿಗೇಡಿಗಳು ಮಾತನಾಡುತ್ತಾ ನಿಂತಿರುವುದನ್ನು ಗಮನಿಸಬಹುದು. ಈ ವೇಳೆ ಯುವತಿಯೊಬ್ಬಳನ್ನು ನೋಡಿದ ತಕ್ಷಣ ಕೀಟಲೆ ಮಾಡಲು ಏನನ್ನೋ ಆಕೆಯತ್ತ ಎಸೆಯುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಘಾತಕ್ಕೊಳಗಾದ ಯುವತಿ ನಿಂತು ಹಿಂದೆ ತಿರುಗುತ್ತಾಳೆ. ಆಕೆಯ ಜೊತೆಗಿದ್ದ ವ್ಯಕ್ತಿಯ ಜೊತೆಗೆ ಜಗಳ ಬೇಡ ಎನ್ನುತ್ತಾ ಮುಂದುವರೆಯುವಂತೆ ಹೇಳುತ್ತಾಳೆ.

ಆದರೆ, ಇಷ್ಟಕ್ಕೇ ನಿಲ್ಲಿಸದ ಕಿಡಿಗೇಡಿ ಏನೋ ಮಾತನಾಡುತ್ತಾನೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಒಂದೇ ಏಟಿಗೆ ಆತನನ್ನು ಹೊಡೆದುರುಳಿಸುತ್ತಾನೆ. ಈ ವೇಳೆ ಮತ್ತೊಬ್ಬ ಕಿಡಿಗೇಡಿ ಕೂಡ ದಾಳಿಗೆ ಮುಂದಾಗುತ್ತಾನೆ. ಅವನನ್ನೂ ಹೊಡೆದುರುಳಿಸಿ ಯುವತಿ ಹಾಗೂ ವ್ಯಕ್ತಿ ಮುಂದೆ ಸಾಗುತ್ತಾರೆ. ಆದರೆ, ಒಂದೇ ಏಟಿಗೆ ನೆಲಕ್ಕುರುಳಿದ ವ್ಯಕ್ತಿ ಮಾತ್ರ ಮೇಲೇಳಲೇ ಇಲ್ಲ. ಇದೆಲ್ಲಾ ಬೇಕಿತ್ತಾ ನಿನಗೆ ಅನ್ನೋ ಪರಿಸ್ಥಿತಿ ಅವನದ್ದಾಗಿದೆ,

ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಗೇಡಿಗಳಿಗೆ ತಕ್ಕಪಾಠ ಕಲಿಸಿದ್ದಕ್ಕೆ ಶ್ಲಾಘಿಸಿದ್ದಾರೆ. ಹಲವರು ಇದನ್ನು ತತ್‌ಕ್ಷಣದ ಕರ್ಮ ಎಂದು ಕರೆದಿದ್ದಾರೆ. ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಈ ವಿಡಿಯೋ ಮೂರು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

https://twitter.com/cctv_videos/status/1641422234656059392?ref_src=twsrc%5Etfw%7Ctwcamp%5Etweetembed%7Ctwterm%5E1641422234656059392%7Ctwgr%5Ed5dec20b9bb96f26185493ca11b64a8f19bf3228%7Ctwcon%5Es1_&ref_url=https%3A%2F%2Fwww.news18.com%2Fviral%2Fthe-fainting-punch-man-knocks-down-eve-teaser-in-a-single-strike-7546585.html

https://twitter.com/cctv_videos/status/1641422234656059392?ref_src=twsrc%5Etfw%7Ctwcamp%5Etweetembed%7Ctwterm%5E1641603798849277954%7Ctwgr%5Ed5dec20b9bb96f26185493ca11b64a8f19bf3228%7Ctwcon%5Es2_&ref_url=https%3A%2F%2Fwww.news18.com%2Fviral%2Fthe-fainting-punch-man-knocks-down-eve-teaser-in-a-single-strike-7546585.html

For Latest News Updates, Join Our Whatsapp Community🚩
RELATED ARTICLES

Most Popular