HomeLatest NewsBREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ಕಾನ್ಸ್'ಟೇಬಲ್ ಗೆ ಸಂಕಷ್ಟ.!

BREAKING : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ಕಾನ್ಸ್’ಟೇಬಲ್ ಗೆ ಸಂಕಷ್ಟ.!

ಬೆಂಗಳೂರು :   ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನಿಯಮ ಉಲ್ಲಂಘಿಸಿ ಭೇಟಿಯಾದ ಯಲಹಂಕ ಮೂಲದ ಕಾನ್ಸ್‌ಟೇಬಲ್ ಒಬ್ಬರ ಪ್ರಕರಣ ಈಗ ಭಾರೀ ಸುದ್ದಿಯಲ್ಲಿದೆ.

ಹೌದು  ಈ ಘಟನೆಯು ಜನವರಿ 24, 2026 ರಂದು ನಡೆದಿದೆ. ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಬಂದಿದ್ದರು. ಆದರೆ, ತಮ್ಮ ಅಧಿಕೃತ ಕೆಲಸ ಮುಗಿಸಿದ ನಂತರ ನಟ ದರ್ಶನ್ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಜೈಲಿನ ವಾರ್ಡನ್ ಪ್ರಭು ಶಂಕರ್ ಎಂಬುವವರು ಈ ಕಾನ್ಸ್‌ಟೇಬಲ್‌ಗೆ ಸಹಾಯ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ದರ್ಶನ್ ಇದ್ದ ಬ್ಯಾರಕ್ ಸಮೀಪಕ್ಕೆ ಕಾನ್ಸ್‌ಟೇಬಲ್ ಅವರನ್ನು ಕರೆದೊಯ್ದು ಭೇಟಿ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

ಜನವರಿ 26 ರಂದು ಜೈಲುಗಳ ಮಹಾನಿರ್ದೇಶಕ (DGP) ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅನಾಮಧೇಯ ಪೊಲೀಸ್ ಅಧಿಕಾರಿಯೊಬ್ಬರು ನಿರ್ಬಂಧಿತ ಪ್ರದೇಶದಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾರ್ಡನ್ ವರ್ಗಾವಣೆ: ನಿಯಮ ಉಲ್ಲಂಘಿಸಿ ಭೇಟಿಗೆ ಅವಕಾಶ ಮಾಡಿಕೊಟ್ಟ ವಾರ್ಡನ್ ಪ್ರಭು ಶಂಕರ್  ಅವರನ್ನು ತಕ್ಷಣವೇ ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದೆ.ನಿಯಮ ಮೀರಿ ಜೈಲಿನೊಳಗೆ ನಟನನ್ನು ಭೇಟಿಯಾದ ಯಲಹಂಕ ಕಾನ್ಸ್‌ಟೇಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಅವರು ಈಶಾನ್ಯ ವಿಭಾಗದ ಡಿಸಿಪಿಗೆ ಸೂಚಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ಹಿಂದೆಯೂ ದರ್ಶನ್ ಅವರಿಗೆ “ರಾಜಾತಿಥ್ಯ” ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಈಗ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular