HomeIndiaಭಯಾನಕ ಸಾವು: ಯಜಮಾನನನ್ನೇ ಬಲಿ ತೆಗೆದುಕೊಂಡ ಒಂಟೆ

ಭಯಾನಕ ಸಾವು: ಯಜಮಾನನನ್ನೇ ಬಲಿ ತೆಗೆದುಕೊಂಡ ಒಂಟೆ

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಒಂದು ಭಯಾನಕ ಘಟನೆಯಲ್ಲಿ, ಸಾಲ ಮಾಡಿ ತಂದಿದ್ದ ಒಂಟೆಯೊಂದು ತನ್ನ ಯಜಮಾನನನ್ನೇ ಕಚ್ಚಿ ಕೊಂದಿದೆ. ಈ ಘಟನೆ ಅಜೀತ್‌ಸರ್ ಗ್ರಾಮದಲ್ಲಿ ನಡೆದಿದ್ದು, ರಾಮ್‌ಲಾಲ್ ಎಂಬ ರೈತ ತನ್ನ ಕುಟುಂಬ ನಿರ್ವಹಣೆಗಾಗಿ ಈ ಒಂಟೆಯನ್ನು ಖರೀದಿಸಿದ್ದನು.

ರಾಮ್‌ಲಾಲ್, ಒಂಟೆಯನ್ನು ಕಟ್ಟಿ ಹಾಕುವಾಗ, ಒಂಟೆ ಇದ್ದಕ್ಕಿದ್ದಂತೆ ಕೋಪಗೊಂಡು ಆತನ ತಲೆಯನ್ನು ತನ್ನ ದವಡೆಯಲ್ಲಿ ಸಿಕ್ಕಿಸಿಕೊಂಡು, ಭೀಕರವಾಗಿ ದಾಳಿ ಮಾಡಿದೆ. ರಾಮ್‌ಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದೃಶ್ಯವನ್ನು ನೋಡಿದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ. ಕೆಲವು ತಿಂಗಳ ಹಿಂದೆ ಬಿಕಾನೇರ್‌ನಲ್ಲೂ ಒಂಟೆಯೊಂದು ತನ್ನ ಯಜಮಾನನನ್ನು ಕೊಂದಿತ್ತು. ಒಂಟೆಗಳು ಬಹಳ ಸೂಕ್ಷ್ಮ ಪ್ರಾಣಿಗಳಾಗಿದ್ದು, ಅವು ಕೋಪಗೊಂಡರೆ ಅವುಗಳನ್ನು ನಿಯಂತ್ರಿಸುವುದು ಕಷ್ಟ ಎಂದು ಸ್ಥಳೀಯರು ಹೇಳುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯಕ್ಕೆ ಒಂಟೆಯನ್ನು ಮರಕ್ಕೆ ಕಟ್ಟಲಾಗಿದೆ. ಆದರೆ, ಕುಟುಂಬಸ್ಥರು ಅದನ್ನು ಕೊಲ್ಲಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ರಾಮ್‌ಲಾಲ್ ಅವರಿಗೆ ಮೂವರು ಮಕ್ಕಳಿದ್ದು, ಈ ಘಟನೆ ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular