HomeKarnatakaಮದುವೆಯ ಕೊನೆ ಕ್ಷಣದಲ್ಲಿ ಕೈಕೊಟ್ಟ ವಧು, ನಿಶ್ಚಯವಾಗಿದ್ದ ಮುಹೂರ್ತದಲ್ಲೇ ಬೇರೆ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ...

ಮದುವೆಯ ಕೊನೆ ಕ್ಷಣದಲ್ಲಿ ಕೈಕೊಟ್ಟ ವಧು, ನಿಶ್ಚಯವಾಗಿದ್ದ ಮುಹೂರ್ತದಲ್ಲೇ ಬೇರೆ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಕ

ಗದಗ: ಸೋಮವಾರ ನಿಗದಿಯಾಗಿದ್ದ ಮುಹೂರ್ತದಲ್ಲಿ ಮದುವೆಯಾಗಬೇಕಿದ್ದ ವಧು ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದರಿಂದ ಅದೇ ಮುಹೂರ್ತದಲ್ಲಿ ಬೇರೆ ಯುವತಿಯೊಂದಿಗೆ ಮದುವೆ ನೆರವೇರಿದೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸೋಮವಾರ ಘಟನೆ ನಡೆದಿದೆ. ನರಗುಂದದ ಕಸಬಾ ಬಡಾವಣೆಯ ನಿಂಗಪ್ಪ ಬಸಪ್ಪ ಸವದಿ ಅವರ ಮದುವೆ ಬಾದಾಮಿ ತಾಲೂಕಿನ ಮಾಗನೂರು ಗ್ರಾಮದ ಯುವತಿಯೊಂದಿಗೆ ಸೋಮವಾರ ನಡೆಯಬೇಕಿತ್ತು.

ಆದರೆ, ವೈಯಕ್ತಿಕ ಕಾರಣದಿಂದ ಶನಿವಾರ ರಾತ್ರಿ ಏಕಾಏಕಿ ಯುವತಿ ಮದುವೆಗೆ ನಿರಾಕರಿಸಿದ್ದಾರೆ. ಈ ಬಗ್ಗೆ ಆಕೆಯ ಪೋಷಕರು ಲಿಖಿತ ಮುಚ್ಚಳಿಕೆ ಪತ್ರವನ್ನು ಬರೆದು ಕೊಟ್ಟಿದ್ದಾರೆ. ಆದರೆ ವರನ ಪೋಷಕರಿಗೆ ಇದು ಶಾಕ್ ನೀಡಿದೆ. ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಕೊನೆ ಕ್ಷಣದಲ್ಲಿ ಮದುವೆ ನಿಲ್ಲಿಸುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊನೆಗೆ ಹಿರಿಯರು, ಗುರುಗಳು ಮದುವೆ ನಿಲ್ಲಿಸುವುದು ಬೇಡ ಎಂದು ವರನ ಪೋಷಕರಿಗೆ ಧೈರ್ಯ ಹೇಳಿ ಬೇರೆ ಯುವತಿ ಹುಡುಕಾಟ ನಡೆಸಿದ್ದಾರೆ. ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದ ಯುವತಿ ಮತ್ತು ಆಕೆಯ ತಂದೆ ತಾಯಿಗೆ ನಡೆದ ಘಟನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವರ ಒಪ್ಪಿಗೆ ಪಡೆದು ಸೋಮವಾರ ನಿಗದಿಯಾಗಿದ್ದ ಮುಹೂರ್ತದಲ್ಲಿಯೇ ಮದುವೆ ನೆರವೇರಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular