ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “RSSನ ಗೊಡ್ಡು ದೊಣ್ಣೆಗಳಿಗೆ ಹೆದರುವುದಕ್ಕೆ ನನ್ನಲ್ಲಿ ಹರಿಯುತ್ತಿರುವುದು ಸಾವರ್ಕರ್ ರಕ್ತವಲ್ಲ” ಎಂದು ಕಿಡಿಕಾರಿದ್ದಾರೆ. ತಮ್ಮ ವಿರುದ್ಧದ ಟೀಕೆಗಳು ಹಾಗೂ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ “ಸಾರ್ವಜನಿಕ ಸ್ಥಳಗಳ ಬಳಕೆಗೆ ಕಾನೂನು, ನಿಯಮಗಳನ್ನು ಪಾಲನೆ ಮಾಡಬೇಕು” ಎಂದರೆ ಬಿಜೆಪಿಯವರು ಇದು RSSಗೇ ಹೇಳಿರುವುದು ಎಂದು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ.. ಕುಂಬಳಕಾಯಿ ಕದ್ದವರಿಗೆ ಮಾತ್ರ ಹೆಗಲು ಮುಟ್ಟಿ ನೋಡಿಕೊಳ್ಳುವಂತಹ ಆತಂಕವಿರುತ್ತದೆ! ವಿರೋಧ ಪಕ್ಷದ ನಾಯಕರಾದ ಶ್ರೀ R Ashoka ಅವರು “RSS ಎದುರು ಹಾಕಿಕೊಂಡರೆ ನೀವು ಮನೆಯಿಂದ ಆಚೆ ಬರಲು ಆಗುವುದಿಲ್ಲ” ಎಂದಿದ್ದಾರೆ. ಈ ಬೆದರಿಕೆ ಮಾತುಗಳ ಹಿಂದಿನ ಅರ್ಥವೇನು?
RSS ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸಿದವರನ್ನು ಮುಗಿಸುವ ಅಂಡರ್ ವರ್ಲ್ಡ್ ಮಾಫಿಯಾದವರೇ?ಇಂತಹ ಬೆದರಿಕೆ ಹಾಕುತ್ತಿದ್ದಾರೆಂದರೆ RSS ಕ್ರಿಮಿನಲ್ ಗಳ ಸಮೂಹ ಇರಬಹುದೇ ಅಶೋಕ್ ಅವರೇ?ನಾನು ಮನೆಯಿಂದ ಆಚೆ ಬರುವುದಕ್ಕೆ ಸಂವಿಧಾನದ ರಕ್ಷಣೆ ಇದೆ, ನಾನು ಮುಕ್ತವಾಗಿ ಮಾತನಾಡುವುದಕ್ಕೆ ಬಾಬಾ ಸಾಹೇಬರು ನೀಡಿದ ನೈತಿಕ ಧೈರ್ಯವಿದೆ. ನಿಮ್ಮ RSSನ ಗೊಡ್ಡು ದೊಣ್ಣೆಗಳಿಗೆ ಹೆದರುವುದಕ್ಕೆ ನನ್ನಲ್ಲಿ ಹರಿಯುತ್ತಿರುವುದು ಸಾವರ್ಕರ್ ರಕ್ತವಲ್ಲ, ನಮ್ಮದು ಅಂಬೇಡ್ಕರ್ ರಕ್ತ…ಅಂಬೇಡ್ಕರ್ ಧೈರ್ಯವನ್ನು ನೀಡಿದ್ದಾರೆಯೇ ಹೊರತು ಭಯವನ್ನಲ್ಲ ಎಂದು ಆರ್ ಅಶೋಕ್ ಗೆ ತಿರುಗೇಟು ನೀಡಿದ್ದಾರೆ.
ನಿಮ್ಮೆಲ್ಲರ ಮಕ್ಕಳು ಪೂರ್ಣಕಾಲಿಕ RSS ಪ್ರಚಾರಕರಾಗಿಲ್ಲ ಏಕೆ ?
ಸಮ್ರಾಟ್ ಶ್ರೀ @RAshokaBJPಅವರೇ, ಅಭ್ಯಾಸವೆಂಬಂತೆ, ಯಾವುದೇ ಪರಿಶೀಲನೆ ನಡೆಸದೆ ನಿಮ್ಮ ಸಾಮಾಜಿಕ ಜಾಲತಾಣದ ಫೇಕ್ ಫ್ಯಾಕ್ಟರಿಯ ತಂಡ ಹೇಳಿದ್ದನ್ನೇ ನೀವು ಮುಂದಿಟ್ಟಿದ್ದೀರಿ.. ನಿಮ್ಮ ಫೇಕ್ ಫ್ಯಾಕ್ಟರಿಯನ್ನು ನಂಬಿದರೆ ಮುಜುಗರ ಅನುಭವಿಸುತ್ತೀರಿ.. ಈಗಾಗಲೇ ಹಲವು ವಿಷಯಗಳಲ್ಲಿ ಮುಜುಗರ ಅನುಭವಿಸಿದ್ದೀರಿ ಕೂಡ.. ಬಡವರಿಗಾಗಿ ಇರುವ ಸರ್ಕಾರಿ ಯೋಜನೆಗಳ ಅಕ್ಕಿಯನ್ನು ಕದಿಯುವ ನಿಮ್ಮ ಪಕ್ಷದ ಅಭ್ಯರ್ಥಿ ಹಾಗೂ ಅವರ ಗೂಂಡಾ ಪಡೆಗೆ ಜನರೇ ನೀಡಿದ ಎಚ್ಚರಿಕೆ ಆಗಿತ್ತು ಅದು….ಈಗಲೂ ಸಹ ನಿಮ್ಮ ಸಮಾಜಘಾತುಕ ಶಕ್ತಿಗಳಿಗೆ ಅದೇ ಎಚ್ಚರಿಕೆಯನ್ನು ಕೊಡುತ್ತೇನೆ, ಅದರಲ್ಲಿ ಯಾವುದೇ ಬದಲಾವಣೆಯೂ ಇಲ್ಲ, ರಾಜಿಯೂ ಇಲ್ಲ.. ಇಷ್ಟಕ್ಕೂ ನಾನು ಆ ಭಾಷಣ ಮಾಡಿದಾಗ ನೀವು ಅಧಿಕಾರದಲ್ಲಿದ್ದಿರಿ, ಆಗ ನನ್ನ ವಿರುದ್ಧ ಏಕೆ ಪ್ರಕರಣ ದಾಖಲಿಸಲಿಲ್ಲ? ಏಕೆಂದರೆ, ನಿಮ್ಮ ಬಿಜೆಪಿ ಅಭ್ಯರ್ಥಿ ಮತ್ತು ನಿಮ್ಮ ಗೂಂಡಾಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ನಿಮಗೂ ತಿಳಿದಿತ್ತು ಅಲ್ಲವೇ…? ಅಂದಹಾಗೆ, ನಾನು “Father Quata”ದಿಂದ ಬಂದವನಾಗಿದ್ದರೆ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಏನೆಂದು ಕರೆಯುವಿರಿ, ಅವರು ಯಾವ ಕೋಟಾದಿಂದ ಬಂದವರು? ಅಲ್ಲದೆ, RSS ನೀವು ಹೇಳುತ್ತಿರುವಂತೆ ಉತ್ತಮ ಸಂಘಟನೆಯಾಗಿದ್ದರೆ, ನಿಮ್ಮೆಲ್ಲರ ಮಕ್ಕಳು ಪೂರ್ಣಕಾಲಿಕ RSS ಪ್ರಚಾರಕರಾಗಿಲ್ಲ ಏಕೆ? ಅವರನ್ನು ಶಾಖೆಗಳಿಗೆ ಕಳುಹಿಸಲು ನಿಮಗೆ ಯಾಕಿಷ್ಟು ಭಯ? ಎಂದು ಆರ್ ಅಶೋಕ್ ಗೆ ತಿರುಗೇಟು ನೀಡಿದ್ದಾರೆ.

