HomeBeautyಕಪ್ಪಾದ ಆಕರ್ಷಕ ಹುಬ್ಬಿಗೆ ಬೆಸ್ಟ್ ಹರಳೆಣ್ಣೆ.....!

ಕಪ್ಪಾದ ಆಕರ್ಷಕ ಹುಬ್ಬಿಗೆ ಬೆಸ್ಟ್ ಹರಳೆಣ್ಣೆ…..!

ಅಂದದ ಮುಖಕ್ಕೆ ಕಣ್ಣ ಹುಬ್ಬುಗಳೇ ಭೂಷಣ. ಕಣ್ಣ ಹುಬ್ಬುಗಳನ್ನು ದಪ್ಪಗಾಗಿ ಆಕರ್ಷಣೀಯವಾಗಿ ಕಾಣುವಂತೆ ಮಾಡುವುದು ಹೇಗೆಂದು ನೋಡೋಣ.

ಹರಳೆಣ್ಣೆಯನ್ನು ನಿತ್ಯ ಮಲಗುವ ಮುನ್ನ ಕಣ್ಣ ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಹುಬ್ಬಿನ ಕೂದಲು ಬಹುಬೇಗ ಬೆಳೆಯುತ್ತದೆ. ಸಂಪೂರ್ಣ ಮೇಕಪ್ ತೆಗೆದ ಬಳಿಕ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆದು ಕೊನೆಗೆ ಇದನ್ನು ಹಚ್ಚಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಲಿವ್ ಆಯಿಲ್ ಕೂಡಾ ಇದೇ ಪರಿಣಾಮವನ್ನು ನೀಡುತ್ತದೆ. ಹುಬ್ಬುಗಳಿಗೆ ಇದನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಎರಡು ಗಂಟೆ ಬಳಿಕ ತೊಳೆದರೆ ತಿಂಗಳಲ್ಲಿ ನಿಮ್ಮ ಹುಬ್ಬಿನ ಕೂದಲು ದಪ್ಪಗಾಗಿ ಬೆಳೆಯುತ್ತದೆ.

ವಿಟಮಿನ್ ಇ ಕ್ಯಾಪ್ಸೂಲ್ ನಲ್ಲಿರುವ ಎಣ್ಣೆಯನ್ನು ಹುಬ್ಬುಗಳಿಗೆ ಹಚ್ಚಿ. ಮಸಾಜ್ ಮಾಡಿ. ರಾತ್ರಿ ಹಚ್ಚಿ ಮಲಗಿದರೆ ಬೆಳಗೆದ್ದು ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ತೆಂಗಿನೆಣ್ಣೆಯನ್ನೂ ಇದೇ ರೀತಿ ಬಳಸಬಹುದು. ನೈಸರ್ಗಿಕ ಎಣ್ಣೆಗಳಾಗಿದ್ದರೆ ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular